Connect with us

    LATEST NEWS

    ಪುಣೆ : ಎಳೆ ಕರುವಿನ ಮೇಲೆ ಅತ್ಯಾಚಾರ ನಡೆಸಿದ ಯುವಕನ ಬಂಧನ..!

    ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಎಳೆಯ ಎಮ್ಮೆಯ ಕರುವಿನ ಮೇಲೆ ಅತ್ಯಾಚಾರ ನಡೆಸಿದ 24 ವರ್ಷದ ಯುವಕನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಪುಣೆಯ ಚಿಕಾಲಿ ಪ್ರದೇಶದಲ್ಲಿ ಈ ಹೇಯಾ ಕೃತ್ಯ ನಡೆದಿದ್ದು ಆರೋಪಿ ನಿರಂತರವಾಗಿ ಎಮ್ಮೆ ಕರುವಿನ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಪುಣೆಯ ಚಿಕಾಲಿಯ ಜಾಧವವಾಡಿ ಪ್ರದೇಶದಲ್ಲಿ ಆಗಸ್ಟ್ 18 ಮತ್ತು ಅಕ್ಟೋಬರ್ 2 ರ ನಡುವೆ ಆರೋಪಿ ಯುವಕ ಎಮ್ಮೆಯ ಕರುವಿನ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ. ಮಾಲೀಕರು ಕರುವಿನ ಕಾಲುಗಳನ್ನು ಕಟ್ಟಿದ್ದನ್ನು ಗಮನಿಸಿದ್ದಾರೆ. ಕೂಡಲೇ ವೈದ್ಯಕೀಯ ಚಿಕಿತ್ಸೆಗೊಳಪಡಿಸಿದಾಗ ಹೇಯಾ ಕೃತ್ಯ ಬೆಳಕಿಗೆ ಬಂದಿದೆ.ಬಳಿಕ ಆರೋಪಿ ವಿರುದ್ಧ ಪುಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ರಾಮಕಿಶನ್ ಚೌಹಣ್ ಬಂಧಿತ ಆರೋಪಿಯಾಗಿದ್ದು 24 ವರ್ಷದ ಈತ ಉತ್ತರ ಪ್ರದೇಶದ ಮಹಾರಾಜಗಂಜ್ ‌ಮೂಲದವನು. ಸದ್ಯ ಪುಣೆಯ ಚಿಕಾಲಿ ಪ್ರದೇಶದಲ್ಲಿ ವಾಸವಾಗಿದ್ದಾನೆ. ಸ್ಥಳೀಯರು ಸಲ್ಲಿಸಿದ ಸಾಕ್ಷ್ಯದ ಆಧಾರದ ಮೇಲೆ ಯುವಕನನ್ನು ಬಂಧಿಸಲಾಗಿದೆ.

    ಆತನ ವಿರುದ್ಧ ಸೆಕ್ಷನ್ 377 (ಅಸ್ವಾಭಾವಿಕ ಲೈಂಗಿಕತೆ) ಮತ್ತು ಭಾರತೀಯ ದಂಡ ಸಂಹಿತೆಯ ಇತರ ಸಂಬಂಧಿತ ನಿಬಂಧನೆಗಳು ಮತ್ತು ಪ್ರಾಣಿಗಳ ವಿರುದ್ಧ ಕ್ರೌರ್ಯ ತಡೆ ಕಾಯ್ದೆಯ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಚಿಕಾಲಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್‌ ಇನ್ಸ್‌ಪೆಕ್ಟರ್ ಧ್ಯಾನೇಶ್ವರ ಕಾಟ್ಕರ್ ಅವರು ತಿಳಿಸಿದ್ದಾರೆ. ಮುಂಜಾಗೃತ ಕ್ರಮವಾಗಿ ಎಮ್ಮೆ ಮಾಲೀಕರು ಶೆಲ್ಟರ್‌ನಲ್ಲಿ ಸಿಸಿಟಿವಿ ಅಳವಡಿಸಿದ್ದರು.

    ಇಷ್ಟಾಗಿಯೂ ಆರೋಪಿ ಲೈಟ್ಸ್ ಆಫ್ ಮಾಡಿ, ಕುರವಿನ ಮೇಲೆ ಅತ್ಯಾಚಾರ ನಡೆಸುತ್ತಿದ್ದ. ಲೈಟ್ಸ್ ಆಫ್ ಆಗುತ್ತಿದ್ದರಿಂದ ಅನುಮಾನಗೊಂಡು ಮಾಲೀಕರು ಬಂದು ನೋಡಿದಾಗ ಎಮ್ಮೆ ಕರು ನರಳಾಡುತ್ತಿರುವುದನ್ನು ಕಂಡಿದ್ದಾರೆ. ಬಳಿಕ ಸಿಸಿಟಿವಿ ದೃಶ್ಯಗಳನ್ನು ಗಮನಿಸಿದಾಗ, ಯುವಕ ಎಮ್ಮೆ ಕರುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವುದು ಗೊತ್ತಾಗಿದೆ. ಈ ಬಗ್ಗೆ ಗೊತ್ತಾಗಿ ಆರೋಪಿ ಸಿಸಿಟಿವಿ ಉಪಕರಣಗಳನ್ನು ಕೂಡ ಹಾನಿ ಮಾಡಿದ್ದ ಎಂದು ದೂರುದಾರರು ದೂರಿನಲ್ಲಿ ಉಲ್ಲೇಖಿಸಿದ್ದು ಸದ್ಯ ಆರೋಪಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.

     

    Share Information
    Advertisement
    Click to comment

    You must be logged in to post a comment Login

    Leave a Reply