LATEST NEWS
ಮಂಗಳೂರು ಪಂಪ್ ವೆಲ್ ಪ್ಲೈಓವರ್ ಗೆ ವೀರ ಸಾವರ್ಕರ್ ಹೆಸರು…!!

ಮಂಗಳೂರು ಪಂಪ್ ವೆಲ್ ಪ್ಲೈಓವರ್ ಗೆ ವೀರ ಸಾವರ್ಕರ್ ಹೆಸರು…!!
ಮಂಗಳೂರು ಜೂನ್. 2: ಯಲಹಂಕ ಡೈರಿ ವೃತ್ತದ ನೂತನ ಮೇಲ್ಸೇತುವೆಗೆ ಸಾವರ್ಕರ್ ಹೆಸರು ನಾಮಕರಣ ಮಾಡುವುದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೆ ಮಂಗಳೂರಿನ ಪಂಪ್ ವೆಲ್ ಪ್ಲೈಓವರ್ ನ ವೀರ ಸಾವರ್ಕರ್ ಹೆಸರಿನಿಂದ ನಾಮಕರಣ ಮಾಡಲಾಗಿದೆ. ವಿರ್ ಸಾವರ್ಕರ್ ಹೆಸರಿನ ಬ್ಯಾನರ್ ನ್ನು ಹಾಕಲಾಗಿದೆ.
ರಾತ್ರಿ ಸಂದರ್ಭ ಯಾರೋ ಅಪರಿಚಿತರು ಪಂಪ್ ವೆಲ್ ಪ್ಲೈಓವರ್ ಮೇಲೆ ಬ್ಯಾನರ್ ಅಂಟಿಸಿದ್ದರು. ನಂತರ ಪಂಪ್ ವೆಲ್ ಪ್ಲೈಓವರ್ ನಲ್ಲಿ ವೀರ ಸಾವರ್ಕರ್ ಹೆಸರನ್ನು ಬರೆದು, ಸಂಘಟನೆಯ ಹೆಸರನ್ನು ಅದರ ಜೊತೆಗೆ ಬರೆದಿದ್ದಾರೆ. ಅಲ್ಲದೆ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

ಸದ್ಯ ಬೆಂಗಳೂರು ಪ್ಲೈಓವರ್ ಗಲಾಟೆ ಮುಗಿಯುವ ಮೊದಲೆ ಜಿಲ್ಲೆಯಲ್ಲಿ ಪಂಪ್ ವೆಲ್ ಪ್ಲೈಓವರ್ ನಲ್ಲಿ ವೀರ ಸಾವರ್ಕರ ಹೆಸರು ಬರೆದಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗುವ ಸಾದ್ಯತೆ ಇದೆ ಎಂದು ಹೇಳಲಾಗಿದೆ.