LATEST NEWS
ದ.ಕ. ಜಿಲ್ಲೆಗೆ ಗುಡ್ ನ್ಯೂಸ್ ಗರ್ಭಿಣಿ ಮಹಿಳೆ ಸೇರಿದಂತೆ 13 ಮಂದಿ ಕೊರೊನಾದಿಂದ ಗುಣಮುಖ
ದ.ಕ. ಜಿಲ್ಲೆಗೆ ಗುಡ್ ನ್ಯೂಸ್ ಗರ್ಭಿಣಿ ಮಹಿಳೆ ಸೇರಿದಂತೆ 13 ಮಂದಿ ಕೊರೊನಾದಿಂದ ಗುಣಮುಖ
ಮಂಗಳೂರು, ಜೂ 02: ಕರಾವಳಿ ಜಿಲ್ಲೆಗಳಲ್ಲಿ ಮಹಾರಾಷ್ಟ್ರದ ಸಂಪರ್ಕದಿಂದ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಏರುತ್ತಲೇ ಇದೆ. ಒಂದೆಡೆ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿರಂತರವಾಗಿ ಜಿಲ್ಲೆಯನ್ನು ಕಾಡುತ್ತಿದ್ದರೆ. ಈ ನಡುವೆ ದ.ಕ. ಜಿಲ್ಲೆಯಲ್ಲಿ ಸ್ವಲ್ಪ ನಿಯಂತ್ರಣದಲ್ಲಿದೆ ಮಂಗಳವಾರದಂದು ದ.ಕ. ಜಿಲ್ಲೆಯ ಜನತೆಗೆ ಸಿಹಿ ಸುದ್ದಿ ಲಭ್ಯವಾಗಿದೆ. ಈ ದಿನ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಮಂಗಳವಾರ ಲಭ್ಯವಾದ ಎಲ್ಲಾ 113 ಮಂದಿಯ ವರದಿಗಳು ನೆಗೆಟಿವ್ ಆಗಿದೆ.
ಇಂದು 13 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ವೆನ್ಲಾಕ್ ಕೊವಿಡ್ ಆಸ್ಪತ್ರೆಯಿಂದ ಗರ್ಭಿಣಿ ಮಹಿಳೆಯೂ ಸೇರಿದಂತೆ ಒಟ್ಟು 13 ಮಂದಿ ಕೊವಿಡ್ 19 ಸೊಂಕಿತ ರೋಗಿಗಳು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದರಲ್ಲಿ 40 ವರ್ಷದ ಮಹಿಳೆ ಕೋವಿಡ್ ಸೊಂಕಿನ ಜೊತೆಗೆ ಇತರ ಕಾಯಿಲೆಗಳಿಂದಲೂ ಬಳಲುತ್ತಿದ್ದು, ತೀವ್ರ ಗಂಭೀರ ಸ್ಥಿತಿಯಲ್ಲಿ ಅವರ ಆರೋಗ್ಯ ಪರಿಸ್ಥಿತಿ ಇದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅವರ ಗಂಟಲು ದ್ರವ ಪರೀಕ್ಷೆ ವರದಿ ಬಂದಿದ್ದು ವರದಿ ನೆಗೆಟಿವ್ ಆಗಿದೆ.
ಸೋಮವಾರದಂದು ದ.ಕ. ಜಿಲ್ಲೆಯಲ್ಲಿ ನಾಲ್ವರಲ್ಲಿ ಸೋಂಕು ಪತ್ತೆಯಾಗಿತ್ತು. ಆರಂಭದಲ್ಲಿ ಸೋಂಕಿನ ಮೂಲದ ಬಗ್ಗೆ ಸ್ವಲ್ಪಗೊಂದಲವಿತ್ತು. ಆದರೆ, ಜಿಲ್ಲಾಡಳಿತ ಸೋಂಕಿನ ಮೂಲ ಪತ್ತೆ ಹಚ್ಚಿದೆ. ಆದರೆ, ಮಂಗಳವಾರದಂದು ದ.ಕ. ಜಿಲ್ಲೆಯ ಜನತೆ ಆತಂಕಗೊಳ್ಳುವಂತಹ ಯಾವುದೇ ವರದಿಗಳಿಲ್ಲ. ಜಿಲ್ಲೆಯಲ್ಲಿ ಪರೀಕ್ಷೆಯ ಬಳಿಕ ಲಭ್ಯವಾದ ಎಲ್ಲಾ 113 ಮಂದಿಯ ಕೋವಿಡ್ ವರದಿ ನೆಗೆಟಿವ್ ಬಂದಿದೆ.