LATEST NEWS
ಹಿರಿಯಡ್ಕ- ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಪಿಯುಸಿ ವಿಧ್ಯಾರ್ಥಿನಿ ನಯನಾ

ಉಡುಪಿ, ಜುಲೈ 23: ಪಿಯುಸಿ ಕಲಿಯುತ್ತಿರುವ ವಿಧ್ಯಾರ್ಥಿನಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಹಿರಿಯಡ್ಕದಲ್ಲಿ ನಡೆದಿದೆ.
ಮೃತ ವಿಧ್ಯಾರ್ಥಿನಿಯನ್ನು ಪೆರ್ಡೂರು ಪ್ರಥಮ ದರ್ಜೆ ಸರಕಾರಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಹಿರಿಯಡ್ಕ ನಿವಾಸಿ ನಯನಾ(17) ಎಂದು ಗುರುತಿಸಲಾಗಿದೆ.

ಸೋಮವಾರ ಬೆಳಗ್ಗೆ ತನ್ನ ಮನೆಯಲ್ಲಿ ಒಬ್ಬಂಟಿ ಇದ್ದಾಗ ಯುವತಿ ಈ ಕೃತ್ಯ ಎಸಗಿದ್ದಾಳೆ. ಆಕೆಯ ತಾಯಿ ಶೋಭಾ ಈ ಬಗ್ಗೆ ಹಿರಿಯಡ್ಕ ಠಾಣೆಗೆ ದೂರು ನೀಡಿದ್ದಾರೆ. ತನ್ನದೇ ಚೂಡಿದಾರ್ ಶಾಲನ್ನು ಬಳಸಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾಳೆ. ಘಟನೆಗೆ ಕಾರಣ ಏನೆಂದು ತಿಳಿದುಬಂದಿಲ್ಲ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.