LATEST NEWS
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ SI ವಿರುದ್ದ ಪ್ರತಿಭಟನೆ

ಪುತ್ತೂರು ಸೆಪ್ಟೆಂಬರ್ 13: ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಅಬ್ದುಲ್ ಖಾದರ್ ಹಾಗೂ ಸಿಬ್ಬಂದಿಗಳಾದ ಚಂದ್ರ ರುಕ್ಮರ ಕಾರ್ಯವೈಖರಿಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಸೆಪ್ಟೆಂಬರ್ 15 ರಂದು ಪುತ್ತೂರಿನಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಸಂಘಟನೆಯ ಮುಖಂಡ ರತ್ನಾಕರ್ ಅಡ್ಯಂತಾಯ ಹೇಳಿದರು.
ಗ್ರಾಮಾಂತರ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಿರಂತರವಾಗಿ ಅಕ್ರಮ ಗೋ ಸಾಗಾಟ, ಲವ್ ಜಿಹಾದ್ ಸೇರಿದಂತೆ ಅಕ್ರಮಗಳು ನಡೆಯುತ್ತಿದ್ದರೂ ಠಾಣಾಧಿಕಾರಿಗಳು ಇದರ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ ಎಂದು ಆರೋಪಿಸಿದ ಅವರು ವಿಶೇಷವಾಗಿ ಲವ್ ಜಿಹಾದ್ ಪ್ರಕರಣದಲ್ಲಿ ತೊಡಗಿಕೊಂಡವರ ಪರವಾಗಿ ಎಸ್.ಐ.ಅಬ್ದುಲ್ ಖಾದರ್ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ಅಕ್ರಮ ಗೋ ಸಾಗಾಟ ಹಾಗೂ ಲವ್ ಜಿಹಾದ್ ಪ್ರಕರಣದ ಬಗ್ಗೆ ಈ ಅಧಿಕಾರಿಗೆ ದೂರು ನೀಡಲು ಹೋದ ಸಂದರ್ಭದಲ್ಲಿ ದೂರು ನೀಡಲು ಬಂದವರನ್ನೇ ಗದರಿಸುವ ಕಾರ್ಯ ನಡೆಸುತ್ತಿದ್ದಾರೆ. ಈ ವಿಚಾರಗಳನ್ನೆಲ್ಲಾ ನೋಡಿದಾಗ ಅಬ್ದುಲ್ ಖಾದರ್ ಠಾಣಾಧಿಕಾರಿಯೋ ಅಥವಾ ಮತಾಂಧತೆಯನ್ನು ಹರಡುವ ಮಸೀದಿಯ ಮೌಲಿಯೋ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ ಎಂದರು.
ಸೆಪ್ಟೆಂಬರ್ 15 ರಂದು ನಡೆಸಲಿರುವ ಪ್ರತಿಭಟನೆಗೆ ಪೋಲೀಸ್ ಅನುಮತಿ ನಿರಾಕರಿಸಿದರೂ ಪ್ರತಿಭಟನೆ ಮಾಡಿಯೇ ಸಿದ್ಧ ಎಂದು ಸವಾಲನ್ನೂ ಇದೇ ಸಂದರ್ಭದಲ್ಲಿ ಹೇಳಿದರು. ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತ್ ಪ್ರತಿಭಟನೆಯಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.