Connect with us

    LATEST NEWS

    ಕೊರೊನಾ ನೆಗೆಟಿವ್ ವರದಿ ಕಡ್ಡಾಯ ವಿರೋಧಿಸಿ ತಲಪಾಡಿಯಲ್ಲಿ ಕೇರಳಿಗರಿಂದ ಪ್ರತಿಭಟನೆ

    ಮಂಗಳೂರು ಅಗಸ್ಟ್ 03: ಕೇರಳದಲ್ಲಿ ಕೊರೊನಾ ಪ್ರಕರಣ ಏರಿಕೆ ಹಿನ್ನಲೆ ಕೇರಳ ಕರ್ನಾಟಕ ಗಡಿ ಭಾಗಗಳನ್ನು ಬಂಧ ಮಾಡಿರುವುದನ್ನು ವಿರೋಧಿಸಿ ಕಾಸರಗೋಡಿನ ಸ್ಥಳೀಯ ನಿವಾಸಿಗಳು ಗಡಿಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.

    ಸೋಮವಾರದಿಂದ ಕೇರಳದಿಂದ ಕರ್ನಾಟಕ ಪ್ರವೇಶಿಸುವುದಕ್ಕೆ ಕೊರೊನಾ ನೆಗೆಟಿವ್ ರಿಪೋರ್ಟ್‌ ಕಡ್ಡಾಯಗೊಳಿಸಿರುವ ಹಿನ್ನಲೆ ಕರ್ನಾಟಕ ಸರಕಾರದ ಆದೇಶದ ವಿರುದ್ದ ಕೇರಳ ಭಾಗದ ರಸ್ತೆ ಬಂದ್ ಮಾಡಿ ಕೇರಳಿಗರು ಪ್ರತಿಭಟಿಸುತ್ತಿದ್ದಾರೆ.

    ಮಂಗಳೂರಿನಿಂದ ಕೇರಳಕ್ಕೆ ತೆರಳುವ ರಸ್ತೆಗೆ ಅಡ್ಡಲಾಗಿ ನಿಂತು ಪ್ರತಿಭಟನೆ ಶುರುಮಾಡಿದ್ದಾರೆ. ಈ ನಡುವೆ ರಾಜ್ಯ ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ ನೀಡುವಾಗಲೂ ಕೇರಳದ ವಿವಿಧ ಪಕ್ಷಗಳ ಮುಖಂಡರು
    ಪ್ರತಿಭಟನಾಕಾರರು ಸೇರಿ ಪ್ರತಿಭಟಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply