FILM
ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಡ್ಯುಪ್ಲಿಕೇಟ್ ಇವಳು…!!
ಮುಂಬೈ ಅಗಸ್ಟ್ 03: ಸಿನೆಮಾ ನಟರ ಮುಖಭಾವ ಹೊಂದಿರುವ ಹಲವು ಮಂದಿಯನ್ನು ನಾವು ನೋಡಿದ್ದೇವೆ, ಅವರಂತೆ ನಟಸಿ ಜನಪ್ರಿಯತೆಯನ್ನು ಕೆಲವು ಹೊಂದಿದ್ದಾರೆ. ಅದೇ ರೀತಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಅವರನ್ನೇ ಹೋಲುವಂತಹ ಹುಡುಗಿಯೊಬ್ಬಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದಾಳೆ.
ಈಕೆ ಹೆಸರು ಅಶಿತಾ ಸಿಂಗ್, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಐಶ್ವರ್ಯ ರೈ ನಟನೆಯ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಬಾಲಿವುಡ್‌ನ ಪ್ರಸಿದ್ಧ ನಟಿ ಐಶ್ವರ್ಯ ರೈ ಬಚ್ಚನ್ ಅವರನ್ನೇ ಹೋಲುವ ಅಶಿತಾ ಸಿಂಗ್ ಅವರ ವಿಡಿಯೋಗಳು ಈಗ ಸಾಮಾಜಿಕ ತಾಣದಲ್ಲಿ ಸದ್ದು ಮಾಡುತ್ತಿದೆ.
ಅಶಿತಾ ಸಿಂಗ್ ಅವರ ವಿಡಿಯೊಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈಕೆ ನಟಿ ಐಶ್ವರ್ಯಾ ಅವರಂತೆಯೇ ಇದ್ದಾರೆ ಎಂದಿದ್ದಾರೆ. ಅಲ್ಲದೆ, ಬಾಲಿವುಡ್, ತೆಲುಗು ಚಿತ್ರಗಳಲ್ಲಿ ನಾಯಕಿ ಪಾತ್ರದಲ್ಲಿ ಅಭಿನಯಿಸಿ ಎಂದು ಕಮೆಂಟ್ ಮಾಡಿದ್ದಾರೆ.
View this post on Instagram