LATEST NEWS
ಹಲ್ಲೆ ಪ್ರಕರಣ ಕಾಂಗ್ರೇಸ್ ವಿರುದ್ದ ಪ್ರತಿಭಟನೆಗೆ ಇಂಟಕ್ ಸಿದ್ದತೆ
ಹಲ್ಲೆ ಪ್ರಕರಣ ಕಾಂಗ್ರೇಸ್ ವಿರುದ್ದ ಪ್ರತಿಭಟನೆಗೆ ಇಂಟಕ್ ಸಿದ್ದತೆ
ಮಂಗಳೂರು ಅಗಸ್ಟ್ 9: ಕ್ವಿಟ್ ಇಂಡಿಯಾ ಚಳವಳಿಯ ನೆನಪಿಗಾಗಿ ಮಂಗಳೂರಿನ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆದ ಗಲಾಟೆ ಈಗ ಪ್ರತಿಭಟನಾ ಹಂತಕ್ಕೆ ತಲುಪಿದ್ದು, ಕಾಂಗ್ರೇಸ್ ವಿರುದ್ದ ಕಾಂಗ್ರೇಸ್ ಪ್ರತಿಭಟನೆಗೆ ಸಿದ್ದತೆ ನಡೆಸಿದೆ.
ಇಂಟಕ್ ಯುವ ಮುಖಂಡ ಪುನೀತ್ ಶೆಟ್ಟಿ ಮೇಲೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಬೆಂಬಲಿಗರು ಹಲ್ಲೆ ನಡೆಸಿದ್ದು, ಹೊಡೆದಾಟದಿಂದ ಸಭಾಂಗಣ ರಣಾಂಗಣವಾಗಿತ್ತು.
ಇಂದು ದೇಶದಾದ್ಯಂತ ಕಾಂಗ್ರೇಸ್ ಕ್ವಿಟ್ ಇಂಡಿಯಾ ಚಳವಳಿಯ ನೆನಪಿಗಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ಮಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ಪಾದಯಾತ್ರೆ ಮತ್ತು ಪುರಭವನದಲ್ಲಿ ಸಭಾ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಬೊಬ್ಬೆ, ಹಲ್ಲೆ, ತಳ್ಳಾಟ ಹೊಡೆದಾಟದಿಂದ ಸಭಾಂಗಣ ರಣಾಂಗಣವಾಗಿತ್ತು.
ಈ ನಡುವೆ ಯುವ ಇಂಟಕ್ ದಕ್ಷಿಣ ವಿಧಾನಸಭಾ ಅಧ್ಯಕ್ಷ ಪುನೀತ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಇಂಟಕ್ ಪ್ರತಿಭಟನೆಗೆ ಸಿದ್ದತೆ ನಡೆಸಿಕೊಂಡಿದೆ. ದಿನಾಂಕ 16-8-2018ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಪಕ್ಷದ ಕಾರ್ಯಕ್ರಮದಲ್ಲಿ ಹಿರಿಯ ನಾಯಕರ ಎದುರು ಹಲ್ಲೆ ನಡೆಸಿರುವುದು ಖಂಡನೀಯ.ಇದು ಪಕ್ಷದ ವರ್ಚಸ್ಸಿಗೆ ಹಾನಿಯಾಗಿರುತ್ತದೆ. ಯುವ ಇಂಟಕ್ ಮೂಲಕ ಜಿಲ್ಲೆಯಲ್ಲಿ ಯುವಕರು ಬೆಳೆಯುತ್ತಿರುದನ್ನು ಸಹಿಸದ, ಪಕ್ಷದಲ್ಲಿ ವೇದಿಕೆಗೆ ಸೀಮಿತವಾಗಿರುವ ಯುವ ಕಾಂಗ್ರೆಸ್ ನ ಕೆಲವು ಗೂಂಡಾಗಳು ಹಲ್ಲೆ ನಡೆಸಿರುವುದರಿಂದ ಅವರುಗಳನ್ನು ಕೂಡಲೇ ದಸ್ತಗಿರಿ ಮಾಡಬೇಕು. ಪಕ್ಷದ ಎಲ್ಲಾ ನಾಯಕರು ಕಾರ್ಯಕರ್ತರು ಒಗ್ಗಟಾಗಿ ಇಂತಹ ಗೂಂಡಾಗಳಿಗೆ ತಕ್ಕ ಪಾಠ ಕಲಿಸಬೇಕು, ಹಾಗೂ ಪಕ್ಷದ ವರಿಷ್ಠರು ಕೂಡಲೇ ಇವರ ಮೇಲೆ ಶಿಸ್ತು ಕ್ರಮ ಕೈಗೊಳಬೇಕು ಎಂದು ಆಗ್ರಹಿಸಲಾಗಿದ್ದು.
ಆರೋಪಿಗಳನ್ನು ಬಂಧಿಸದಿದ್ದರೆ ಗುರುವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಮುಂಭಾಗದಲ್ಲಿ ಪ್ರತಿಭಟನೆಗೆ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.