Connect with us

    LATEST NEWS

    ತಾನು ಸತ್ತರೂ ತನ್ನ ಹೊಟ್ಟೆಯಲ್ಲಿರುವ ಕಂದಮ್ಮ ಸಾಯಬಾರದೆಂದು ಕರುವಿಗೆ ಜನ್ಮ ನೀಡಿದ ಗೋಮಾತೆ

    ತಾನು ಸತ್ತರೂ ತನ್ನ ಹೊಟ್ಟೆಯಲ್ಲಿರುವ ಕಂದಮ್ಮ ಸಾಯಬಾರದೆಂದು ಕರುವಿಗೆ ಜನ್ಮ ನೀಡಿದ ಗೋಮಾತೆ

    ಮಂಗಳೂರು ಆಗಸ್ಟ್ 10: ಕಟುಕರ ಕೈಗೆ ಸಿಕ್ಕಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು, ತನ್ನ ಹೊಟ್ಟೆಯಲ್ಲಿರುವ ಕಂದಮ್ಮನನ್ನು ಬದುಕಿಸಿದ ಪುಣ್ಯಕೋಟಿ ಗೋವಿನ ಮನಕಲುಕುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಆರು ತಿಂಗಳ ಗರ್ಭಿಣಿಯಾಗಿ ತನ್ನ ಪಾಡಿಗೆ ಅಲ್ಲಿ ಇಲ್ಲಿ ಅಡ್ಡಾಡುತ್ತ ಹುಲ್ಲು ಮೇಯುತ್ತಿದ್ದ ದನದ ಮೇಲೆ ಕಟುಕರ ಕಣ್ಣು ಬಿದ್ದಿತ್ತು. ರಸ್ತೆ ಬದಿಯಲ್ಲಿ ತಣ್ಣನೆ ಮಲಗಿದ್ದ ಆಕೆಯನ್ನು ರಾತ್ರೋರಾತ್ರಿ ಹೊತ್ತೊಯ್ದ ಕಟುಕರು ತಪ್ಪಿಕೊಳ್ಳ ಬಾರದೆಂದು ಆಕೆಯ ಎರಡೂ ಕಾಲನ್ನು ಕಡಿದಿದ್ದರು.

    ಆದರೆ ತಾನು ಸತ್ತರೂ ಪರವಾಗಿಲ್ಲ ತನ್ನ ಹೊಟ್ಟೆಯಲ್ಲಿರುವ ಕಂದಮ್ಮ ರಕ್ಷಣೆಗೆ ಮನಸ್ಸು ಗಟ್ಟಿಗೊಳಿಸಿದ ಆಕೆ ದುರುಳರ ಕೈಯಿಂದ ಬಿಡಿಸಿ ವಾಹನದಿಂದ ಜಿಗಿದಿದ್ದಾಳೆ. ರಸ್ತೆ ಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಮಂಗಳೂರಿನ ಶಕ್ತಿನಗರದ ಆನಿಮಲ್ ಕೇರ್ ಟ್ರಸ್ಟ್ ನ ಸಿಬ್ಬಂದಿ ರಕ್ಷಣೆ ಮಾಡಿದ್ದರು. ಪ್ರೀತಿಯಿಂದ ಸಲುಹಿದ ಟ್ರಸ್ಟ್ ನ ಸಿಬ್ಬಂದಿ ಆಕೆಗೊಂದು ಹೆಸು ಕೊಟ್ಟರು ರಾಧಾ.

    ತನ್ನ ಮುಂದಿನ ಎರಡೂ ಕಾಲುಗಳನ್ನು ಕಳೆದು ಕೊಂಡ ರಾಧಾ ಆಚೆ ನಿಲ್ಲೂ ಆಗದೇ ಮಲಗಲೂ ಆಗದೆ ಮೂರು ತಿಂಗಳು ನರಕಯಾತನೆ ಅನುಭವಿಸಿದ ರಾಧಾ ತುಂಬು ಗರ್ಭಿಣಿ 10 ದಿನಗಳ ಹಿಂದೆ ಮುದ್ದಾದ ಗಂಡು ಕರುವಿಗೆ ಜನ್ಮ ನೀಡಿದ್ದಾಳೆ. ಆದರೆ ದುರಂತ ಅಂದರೆ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಮುದ್ದಾದ ಕರುವಿನ ಚೆಂದದ ತುಂಟಾಟ ಕಣ್ತುಂಬಿಕೊಂಡು ರಾಧಾ 2 ದಿನಗಳ ಹಿಂದೆ ಇಹಲೋಕ ತ್ಯಜಿಸಿದ್ದಾಳೆ.

    ಜನನವಾದ ಹತ್ತೇ ದಿನದಲ್ಲಿ ಮುದ್ದಾದ ಕರು ಈಗ ತಬ್ಬಲಿಯಾಗಿದೆ. ರಾಧಾ ಎಂಬ ಆ ಪುಣ್ಯಕೋಟಿಯ ಮುದ್ದಾದ ಗಂಡು ಕರುವಿಗೆ ಟ್ರಸ್ಟ್ ನ ಸಿಬ್ಬಂದಿಗಳು ಚೋಟಾ ಭೀಮ್ ಎಂದು ಹೆಸರಿಟ್ಟಿದ್ದಾರೆ‌. ಚೋಟಾ ಭೀಮ್ ಈಗ ತಾಯಿ ಇಲ್ಲದ ತಬ್ಬಲಿಯಾಗಿದ್ದರು ಟ್ರಸ್ಟ್ ನ ಸಿಬ್ಬಂದಿ ಬಾಟಲಿ ಹಾಲುಣಿಸಿ ಸಾಕುತ್ತಿದ್ದಾರೆ. ತನ್ನ ಮಗುವನ್ನು ಉಳಿಸಲು ಮೂರು ತಿಂಗಳು ಸಾವು ಬದುಕಿನ ನಡುವೆ ಹೋರಾಡಿ ಕರು ಜನನವಾದ ಕೂಡಲೇ ಕರುವನ್ನು ಕಣ್ತುಂಬಿ ಮರಣ ಹೊಂದಿದ ರಾಧೆಯ ತಾಯಿ ಪ್ರೇಮಕ್ಕೆ ಟ್ರಸ್ಟ್ ಸಿಬ್ಬಂದಿ ಕಣ್ಣೀರಾಗಿದ್ದಾರೆ

    Share Information
    Advertisement
    Click to comment

    You must be logged in to post a comment Login

    Leave a Reply