Connect with us

    LATEST NEWS

    ಮಂಗಳೂರಿನ ಸಿಎಎ ವಿರುದ್ದ ಪ್ರತಿಭಟನೆಗೆ 100 ಕ್ಕೂ ಅಧಿಕ ದೋಣಿಯಲ್ಲಿ ಆಗಮಿಸಿದ ಜನರು

    ಮಂಗಳೂರಿನ ಸಿಎಎ ವಿರುದ್ದ ಪ್ರತಿಭಟನೆಗೆ 100 ಕ್ಕೂ ಅಧಿಕ ದೋಣಿಯಲ್ಲಿ ಆಗಮಿಸಿದ ಜನರು

    ಮಂಗಳೂರು ಜನವರಿ 15: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ದ.ಕ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ದೋಣಿ ಮೂಲಕ ಜನರು ಆಗಮಿಸಿದ್ದಾರೆ. ಉಳ್ಳಾಲದ ಕೋಟೇಪುರದಿಂದ ಅಡ್ಯಾರ್ ಕಣ್ಣೂರುವರೆಗೆ ನದಿಯಲ್ಲಿ 100 ದೋಣಿಯಲ್ಲಿ ಬೃಹತ್ ರ್‍ಯಾಲಿ ಮೂಲಕ ಜನರು ಬಂದಿದ್ದಾರೆ. ಈ ಮೈದಾನ ನೇತ್ರಾವತಿ ನದಿ ತೀರದಲ್ಲಿ ಇರುವುದರಿಂದ ದೋಣಿ ಮೂಲಕ ಕೈಯಲ್ಲಿ ರಾಷ್ಟ್ರಧ್ವಜಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ, ಸಮಾವೇಶದಲ್ಲಿ ಜನ ಭಾಗವಹಿಸಿದ್ದಾರೆ.

    ಕೇಂದ್ರ ಸರಕಾರದ ಎನ್.ಆರ್.ಸಿ ಹಾಗೂ ಸಿಎಎ ಕಾಯ್ದೆ ವಿರುದ್ಧ ಮಂಗಳೂರಿನ ಅಡ್ಯಾರ್ ಕಣ್ಣೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯುತ್ತಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಬಿಗಿ ಭದ್ರತೆಯೊಂದಿಗೆ ಕಾರ್ಯಕ್ರಮ ನಡೆಯುತ್ತಿದೆ.

    ಸಾರೇ ಜಹಾಂಸೆ ಅಚ್ಛಾ ಗೀತೆಯೊಂದಿಗೆ ಆರಂಭಗೊಂಡ ಸಮಾವೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಹ್ಮದ್ ತ್ವಾಕಾ ಮುಸ್ಲಿಯಾರ್ ದುವಾ ನೆರವೇರಿಸದರು. ಇನ್ನು ಸಮಾವೇಶವನ್ನ ಉದ್ದೇಶಿಸಿ ಸಾಮಾಜಿಕ ಹೋರಾಟಗಾರ ಹರ್ಷ ಮಂದರ್, ಶಿವಸುಂದರ್, ನಿವೃತ್ತ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥ್ ಮಾತನಾಡಿದ್ದಾರೆ.

    ಇನ್ನು ಸಭೆಯಲ್ಲಿ ಶಾಸಕ ಯುಟಿ ಖಾದರ್, ಪಿಎಫ್ಐ ರಾಜ್ಯಾಧ್ಯಕ್ಷ ಶಾಕಿಬ್, ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ, ಹಾಗು ಎಸ್ಎಸ್ಎಫ್, ಎಸ್ಕೆಎಸ್ಎಸ್ಎಫ್, ಸಲಫಿ, ಜಮಾಅತ್ ಇಸ್ಲಾಮಿ ಹಾಗೂ ಕಾಂಗ್ರೆಸ್ , ಜೆಡಿಎಸ್ ಹಾಗೂ ಎಡಪಕ್ಷಗಳ ನಾಯಕರು ಸಮಾವೇಶದಲ್ಲಿ ಹಾಜರಿದ್ದಾರೆ.

    ಇನ್ನು ಪ್ರತಿಭಟನೆಯಲ್ಲಿ ಕೇವಲ ತ್ರಿವರ್ಣ ಧ್ವಜ ರಾರಾಜಿಸುತ್ತಿದ್ದು, ಪೊಲಿಸ್ ಅಧಿಕಾರಿಗಳ ವಿರುದ್ಧ ಘೋಷಣಾ ವಾಕ್ಯವಿರುವ ಭಿತ್ತಪತ್ರವು ಕಂಡಬರುತ್ತಿದೆ. ಇನ್ನು ಪ್ರತಿಭಟನೆಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಹಸ್ರ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಆಗಮಿಸಿದ್ದು, ಉಳ್ಳಾಲದ ಕೋಟೆಪುರದಿಂದ ಕಣ್ಣೂರುವರೆಗೆ ನೇತ್ರಾವತಿ ನದಿಯ ಮೂಲಕ ನೂರಾರು ಮಂದಿ ಆಗಮಿಸಿದ್ದು ಗಮನಸೆಳೆಯಿತು.

    Share Information
    Advertisement
    Click to comment

    Leave a Reply

    Your email address will not be published. Required fields are marked *