Connect with us

FILM

ಗಲಾಟೆ ಕೂಗಾಟದ ನಡುವೆ ಬಿಗ್ ಬಾಸ್ ನಲ್ಲಿ ನಗು ಹಂಚುತ್ತಿರುವ ಧನರಾಜ್ ಮತ್ತು ಹನುಮಂತು ಜೋಡಿ

ಬೆಂಗಳೂರು ನವೆಂಬರ್ 25: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 11 ಆರಂಭವಾಗಿ 50 ದಿನಗಳು ಕಳೆದಿದೆ. ಶೋ ಪ್ರಾರಂಭವಾದಾಗಿನಿಂದಲೂ ಕೇವಲ ಗಲಾಟೆ ಕೂಗಾಟಗಳೇ ಹೆಚ್ಚಾಗಿ ಪ್ರಸಾರ ಆಗುತ್ತಿತ್ತು, ಈ ನಡುವೆ ಧನರಾಜ್ ಮತ್ತು ಹನುಮಂತು ಜೋಡಿ ಬಿಗ್ ಬಾಸ್ ನಲ್ಲಿ ಶೋ ನಲ್ಲಿ ನಗು ತರಿಸುತ್ತಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಧನ್ ರಾಜ್ ಗಿಚ್ಚಗಿಲಿಗಿಲಿ ಕಾಮಿಡಿ ಶೋ ನಲ್ಲಿ ಭಾಗವಹಿಸಿದ್ದರು, ಅಲ್ಲದೆ ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಕಾಮಿಡಿ ವಿಡಿಯೋಗಳನ್ನು ಮಾಡಿ ಮೆಚ್ಚುಗೆ ಗಳಿಸಿದ್ದರು. ಬಿಗ್ ಬಾಸ್ ಗೆ ಎಂಟ್ರಿಕೊಟ್ಟ ಬಳಿಕ ಮೊದಲ ವಾರದಲ್ಲೇ ಪ್ರಾರಂಭವಾಗ ಗಲಾಟೆ ಹಾಗೂ ಕೂಗಾಟಕ್ಕೆ ಧನರಾಜ್ ಸೈಲೆಂಟ್ ಆಗಿದ್ದರು. ಕಿಚ್ಚ ಸುದೀಪ್ ಕೂಡ ಧನರಾಜ್ ಅವರ ಸೈಲೆಂಟ್ ಬಗ್ಗೆ ಮಾತನಾಡಿದ್ದರು. ಆದರೆ ಬಿಗ್ ಬಾಸ್ ನಲ್ಲಿ ಮತ್ತೆ ಗಲಾಟೆಗಳೇ ಹೆಚ್ಚಾದಾಗ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಹನುಮಂತು ಬಿಗ್ ಬಾಸ್ ನಲ್ಲೂ ಮನೋರಂಜನೆ ಇದೆ ಎಂದು ತೋರಿಸಿದರು.


ಹನುಮಂತುಗೆ ಜೋಡಿಯಾದ ಧನರಾಜ್ ನಂತರ ಇಡೀ ಬಿಗ್ ಬಾಸ್ ಮನೆಯಲ್ಲಿ ನಗುವನ್ನು ತರುತ್ತಿದ್ದಾರೆ. ಮನೆಯವರೆಲ್ಲಾ ಗಲಾಟೆಯಲ್ಲೇ ಮುಳುಗಿದ್ದರೆ, ಈ ಇಬ್ಬರು ಜೋಡಿ ಮಾತ್ರ ನಗಿಸುವ ಕೆಲಸ ಮಾಡುತ್ತಿದ್ದಾರೆ. ಸ್ವತಃ ಸುದೀಪ್ ಅವರಿಗೂ ವಾರದ ಕೊನೆಯಲ್ಲಿ ಹೊಟ್ಟೆ ಹುಣ್ಣಾಗಿಸುವಂತೆ ಈ ಜೋಡಿ ನಗಿಸುತ್ತಿದೆ. ಬಿಗ್ ಬಾಸ್ ನಲ್ಲಿ ಈ ಇಬ್ಬರು ಜೋಡಿ ಇಲ್ಲದಿದ್ದರೆ ಬರೀ ಗಲಾಟೆ ಕೂಗಾಟದಲ್ಲೇ ಈ ಬಾರಿಯ ಬಿಗ್ ಬಾಸ್ ಮುಗಿಯುತ್ತಿತ್ತು.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *