Connect with us

KARNATAKA

ಹಾಡಹಗಲೇ ಅಂಗಡಿಯಲ್ಲಿ ಕೂತಿದ್ದ ಮಹಿಳೆಯ ಚಿನ್ನದ ಸರ ನಗದು ಲೂಟಿ, ಆರೋಪಿಯನ್ನು ಬೆನ್ನಟ್ಟಿ ತದಕಿದ ಸಾರ್ವಜನಿಕರು..!!

ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ ಮಾಡಿದ ಕಿರಾತಕನನ್ನು ಸಾರ್ವಜನಿಕರು ಹಿಡಿದು ಚೆನ್ನಾಗಿ ತದಕಿದ ಘಟನೆ ಕೊಡಗಿನ ಸೋಮವಾರ ಪೇಟೆಯಲ್ಲಿ ನಡೆದಿದೆ.
ಮಡಿಕೇರಿ: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ ಮಾಡಿದ ಕಿರಾತಕನನ್ನು ಸಾರ್ವಜನಿಕರು ಹಿಡಿದು ಚೆನ್ನಾಗಿ ತದಕಿದ ಘಟನೆ ಕೊಡಗಿನ ಸೋಮವಾರ ಪೇಟೆಯಲ್ಲಿ ನಡೆದಿದೆ.
ಸೋಮವಾರ ಪೇಟೆ ಸ್ವಾಮಿ ವಿವೇಕಾನಂದ ಸರ್ಕಲ್ ಬಳಿಯಿರುವ ಶ್ರೀಕುಮಾರಲಿಂಗೇಶ್ಚರ ಹಾರ್ಡ್ ವೇರ್ ಅಂಗಡಿಯಲ್ಲಿ ಮಾಲತಿ  ಒಬ್ಬರೆ ಕುಳಿತ್ತಿದ್ದ ಸಂದರ್ಭದಲ್ಲಿ ಖರೀದಿಯ ನೆಪದಲ್ಲಿ ಬಂದ ಮೂವರು ಕಳ್ಳರು, ಇದ್ದಕ್ಕಿದ್ದಂತೆ ಕುತ್ತಿಗೆಯಲ್ಲಿದ್ದ ಸರವನ್ನು ಕಿತ್ತು, ಡ್ರಾವರ್‌ನಲ್ಲಿದ್ದ ಹಣವನ್ನು ದೋಚಿ  ಸ್ಕೂಟಿಯಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ಸಂದರ್ಭ ಮಹಿಳೆ  ಚೀರಾಟವನ್ನು ಗಮನಿಸಿದ ಅಕ್ಕಪಕ್ಕದ ವರ್ತಕರು, ಸಾರ್ವಜನಿಕರು ಸ್ಕೂಟಿಯನ್ನು ಬೆನ್ನಟ್ಟಿ  ಒಬ್ಬ ಅರೋಪಿಯನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ. ಅವವನ್ನು ಚೆನ್ನಾಗಿ ತದಕಿದ ಸಾರ್ವಜನಿಕರು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಹಾಸನದ ಇಕ್ಬಾಲ್ ಎಂದು ಗುರುತ್ತಿಸಲಾಗಿದ್ದು ಮತ್ತೊಬ್ಬ ಆರೋಪಿ ಸನಬ್ ಎಂಬಾತ ಬಸ್‌ನಲ್ಲಿ ಹಾಸನ ಪರಾರಿಯಾಗುವಾಗ ಶನಿವಾರ ಸಂತೆ ಬಳಿ ಸಿಕ್ಕಿಬಿದ್ದಿದ್ದಾನೆ. ಮತ್ತೊಋ್ವ ಆರೋಪಿ ಇಬ್ರಾಹಿಂ ಎಂಬವನು ತಲೆಮರೆಸಿಕೊಂಡಿದ್ದಾನೆ.  ವಶಕ್ಕೆ ಪಡೆದ  ಆರೋಪಿಗಳಿಂದ ಒಂದು ಚಿನ್ನದ ಸರ ಮತ್ತು 23,700 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
https://youtu.be/ggFGd9xhle8
Share Information
Continue Reading
Advertisement
Click to comment

Leave a Reply

Your email address will not be published. Required fields are marked *