Connect with us

    LATEST NEWS

    ಮುಸ್ಲಿಂ ಸೆಂಟ್ರಲ್ ಕಮಿಟಿ ಪ್ರತಿಭಟನೆಯ ಪಾಸ್ ಕಾಂಗ್ರೇಸ್ ಕಛೇರಿಯಲ್ಲಿ…..!

    ಮುಸ್ಲಿಂ ಸೆಂಟ್ರಲ್ ಕಮಿಟಿ ಪ್ರತಿಭಟನೆಯ ಪಾಸ್ ಕಾಂಗ್ರೇಸ್ ಕಛೇರಿಯಲ್ಲಿ…..!

    ಮಂಗಳೂರು, ಜನವರಿ 15: ಮುಸ್ಲಿಂ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ ಮಂಗಳೂರಿನ ಅಡ್ಯಾರ್ ಕಣ್ಣೂರು ಮೈದಾನದಲ್ಲಿ ನಡೆಯಲಿರುವ ಕೇಂದ್ರ ಸರಕಾರದ ಸಿಎಎ, ಎನ್.ಆರ್.ಸಿ ವಿರೋಧಿ ಪ್ರತಿಭಟನೆಯ ಪಾಸ್ ಮಂಗಳೂರಿನ ಕಾಂಗ್ರೇಸ್ ಕಛೇರಿಯಲ್ಲಿ ವಿತರಣೆಯಾಗುತ್ತಿರುವುದು ಭಾರೀ ಗೊಂದಲಕ್ಕೆ ಕಾರಣವಾಗಿದೆ.

    ಈ ಕಾನೂನಿನ ವಿರುದ್ಧ ಕಾಂಗ್ರೇಸ್ ಪಕ್ಷ ನೇರವಾಗಿ ಹೋರಾಟಕ್ಕೆ ಇಳಿಯದಿದ್ದರೂ, ಪರೋಕ್ಷವಾಗಿ ಈವರೆಗೆ ಪ್ರತಿಭಟನೆಗೆ ಬೆಂಬಲವನ್ನು ಸೂಚಿಸಿದೆ. ಆದರೆ ಪಕ್ಷದ ಕಛೇರಿಯನ್ನು ಈ ಕಾನೂನಿನ ವಿರುದ್ಧ ನಡೆದ ಪ್ರತಿಭಟನೆಗೆ ಬಳಸಿಕೊಂಡಿಲ್ಲ. ಆದರೆ ಇಂದು ನಡೆಯುವ ಪ್ರತಿಭಟನೆಗೆ ಪತ್ರಕರ್ತರಿಗೆ ಪಾಸ್ ವಿತರಣೆಯನ್ನು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೇಸ್ ಕಛೇರಿಯಲ್ಲಿ ಮಾಡಲಾಗಿದೆ.

    ಕಾಂಗ್ರೇಸ್ ಪಕ್ಷದ ಮುಖಂಡರು, ಶಾಸಕರು ಈ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ಭಾಗವಹಿಸಿದ್ದರೂ, ಕಾಂಗ್ರೇಸ್ ಪಕ್ಷದ ಹೆಸರು ಈ ಪ್ರತಿಭಟನೆಯಲ್ಲಿ ಎಲ್ಲೂ ಕೇಳಿಸಿಕೊಂಡಿಲ್ಲ. ಆದರೆ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಕಾಂಗ್ರೇಸ್ ಪಕ್ಷ ನೇರವಾಗಿ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿರುವುದು ಕಂಡು ಬಂದಿದೆ.

    ಕಾಂಗ್ರೇಸ್ ಪಕ್ಷದಲ್ಲಿರುವ ಹಲವರು ಎನ್.ಆರ್.ಸಿ, ಸಿಎಎ ಕಾನೂನಿನ ವಿಚಾರದಲ್ಲಿ ಮೌನವಹಿಸಿದ್ದು, ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೇಸ್ ನ ನಡೆ ಕಾಂಗ್ರೇಸ್ ಪಕ್ಷದಲ್ಲಿರುವ ಕೆಲವರಿಗೆ ಇರಿಸು ಮುರಿಸು ತರಿಸಿದೆ ಎನ್ನಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply