LATEST NEWS
ಮಲ್ಪೆ ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರ ರಕ್ಷಣೆ
ಮಲ್ಪೆ, ನವೆಂಬರ್ 09: ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರನ್ನು ಜೆಟ್ ಸ್ಕೀ ಮತ್ತು ಪ್ರವಾಸೀ ದೋಣಿಯ ಚಾಲಕರು ರಕ್ಷಿಸಿದ್ದಾರೆ.
ಉಡುಪಿಯ ಮಲ್ಪೆ ಬೀಚಿನಲ್ಲಿ ಈ ಘಟನೆ ನಡೆದಿದ್ದು, ಬೆಂಗಳೂರು ಮೂಲದ ಮೂರು ಜನ ಪ್ರವಾಸಿಗರು
ಬೆಂಗಳೂರಿನಿಂದ ಬಂದಿದ್ದ ಹತ್ತು ಪ್ರವಾಸಿಗರ ತಂಡ ಬಂದಿದ್ದು, ಸಮುದ್ರಕ್ಕೆ ಇಳಿದಿದ್ದಾರೆ, ಸಮುದ್ರದ ಸೆಳೆತಕ್ಕೆ ಮೊದಲು ಯುವತಿ ಮುಳುಗಿದ್ದಾಳೆ, ಯುವತಿಯ ರಕ್ಷಣೆಗೆ ಇಬ್ಬರು ಯುವಕರು ಧಾವಿಸಿದ್ದು, ಈ ಯುವಕರಿಗೆ ಈಜಲು ಬಾರದೆ ಮುಳುಗಿದ್ದಾರೆ.
ಮುಳುಗಿದ ಮೂರು ಮಂದಿಯನ್ನು ಜೆಟ್ ಸ್ಕೀ ಮತ್ತು ಪ್ರವಾಸೀ ದೋಣಿಯ ಚಾಲಕರು ರಕ್ಷಣೆ ಮಾಡಿದ್ದಾರೆ.
ಆಂಬುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗದ್ದು, ಮಲ್ಪೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
Video: