Connect with us

    KARNATAKA

    ಪ್ರಿ ವೆಡ್ಡಿಂಗ್ ಫೋಟೋಶೂಟ್ ನಲ್ಲಿ ದುರಂತ – ತೆಪ್ಪ ಮುಳುಗಿ ನವಜೋಡಿ ಸಾವು

    ಮೈಸೂರು ನವೆಂಬರ್ 9: ಮದುವೆ ಸಂಭ್ರಮದಲ್ಲಿ ಪ್ರಿವೆಡ್ಡಿಂಗ್ ಪೋಟೋ ಶೂಟ್ ಮಾಡಲು ಹೋಗಿ ತೆಪ್ಪ ಮುಳುಗಿ ನವಜೋಡಿ ಸಾವನಪ್ಪಿರುವ ಘಟನೆ ಮೈಸೂರಿನ ತಲಕಾಡಿನಲ್ಲಿ ನಡೆದಿದೆ.

    ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾಗಿದ್ದ ಚಂದ್ರು ಮತ್ತು ಶಶಿಕಲಾ ಮದುವೆ ನಿಶ್ಚಯವಾಗಿತ್ತು. ಅಂತೆಯೇ ನವೆಂಬರ್ 22ರಂದು ಮದುವೆ ಮಾಡಲು ಕುಟುಂಬಸ್ಥರು ತಯಾರಿ ಕೂಡ ನಡೆಸಿದ್ದರು. ಆದರೆ ಚಂದ್ರು ಮತ್ತು ಶಶಿಕಲಾ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಲು ಮನೆಯವರಿಗೆ ಹೇಳದೇ ಮೈಸೂರಿನ ತಲಕಾಡಿನ ಮುಡುಕುತೊರೆ ಗ್ರಾಮದಲ್ಲಿ ಹರಿಯುವ ಕಾವೇರಿ ನದಿಗೆ ಹೋಗಿದ್ದಾರೆ.


    ಮುಡುಕುತೊರೆಯ ಕಾವೇರಿ ನದಿಯಲ್ಲಿ ತೆಪ್ಪವನ್ನು ತೆಗೆದುಕೊಂಡು ಮಧ್ಯಭಾಗದಲ್ಲಿ ಫೋಟೋಶೂಟ್ ಮಾಡಿಸಲು ತೆರೆಳಿದ್ದಾರೆ. ಈ ವೇಳೆ ತೆಪ್ಪ ಮುಳುಗಿ ನವಜೋಡಿಗಳಿಬ್ಬರು ನೀರುಪಾಲಾಗಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಕಾರ್ಯಾಚರಣೆ ಮಾಡಿ ಇಬ್ಬರ ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply