Connect with us

LATEST NEWS

ವಿಶ್ವೇಶತೀರ್ಥರ ಅಧ್ಯಾತ್ಮ‌‌ ಶಿಷ್ಯೆಯ ಅಧ್ಯಾತ್ಮಯಾನದ ರೋಚಕ ಕಥಾನಕ ” ಕಡಲತಡಿಯಿಂದ ಹಿಮಗಿರಿಯ ತನಕ ” (ತಪೋವನೀ ಮಾತಾ ಆತ್ಮಕಥೆ ) ಹರಿದ್ವಾರದಲ್ಲಿ ಲೋಕಾರ್ಪಣೆ

ಹರಿದ್ವಾರ, ನವೆಂಬರ್ 09: ಮೂಲತಃ ಉಡುಪಿಯವರಾಗಿದ್ದು , ಅತ್ಯಂತ ಎಳೆಯ ವಯಸ್ಸಲ್ಲೇ ಜೀವನದ ಜಂಜಾಟಗಳನ್ನೂ ಎದುರಿಸಿ , ಅಧ್ಯಾತ್ಮದ ಸೆಳೆತದಿಂದ ಆ ತರುಣ ವಯಸ್ಸಿನಲ್ಲಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಂದ ಮಂತ್ರದೀಕ್ಷೆ ಪಡೆದು ಹೇಗೋ ಹಠದಿಂದ ಹಿಮಾಲಯ ಸೇರಿ ತಪೋವನದಲ್ಲಿ ( ಪಾಂಡವರು ಕುರುಕ್ಷೇತ್ರ ಯುದ್ಧ ನಂತರ ತಪಸ್ಸಾಚರಿಸಿದ್ದ ಹಾಗೂ ಸಮುದ್ರಮಟ್ಟದಿಂದ ಸುಮಾರು 4000 ಮೀಟರ್ ಎತ್ತರದ ದುರ್ಗಮ ಸ್ಥಳ) ಎಲ್ಲ ಪ್ರಾಕೃತಿಕ ಸವಾಲುಗಳನ್ನೂ ಎದುರಿಸಿ ನಿರಂತರ ಒಂಭತ್ತು ವರ್ಷಗಳ ಕಾಲ ಅತ್ಯಂತ ಭೀಕರ ಚಳಿಯಲ್ಲೂ ಏಕಾಂಗಿಯಾಗಿ ತಪಸ್ಸಾಚರಿಸಿ ಅಧ್ಯಾತ್ಮ ಸಾಧನೆಗೈದ ಪ್ರಾಯಃ ಜಗತ್ತಿನ ಪ್ರಥಮ‌ ಮಹಿಳೆ.

ಬಳಿಕ ಹರಿದ್ವಾರದಲ್ಲೇ ಆಶ್ರಮವೊಂದನ್ನು ಸ್ಥಾಪಿಸಿ ಸಾಧು ಸಂತರು ಯಾತ್ರಿಗಳಿಗೆ ಧರ್ಮಾರ್ಥ ಊಟ ವಸತಿ ಆರೋಗ್ಯ ಸೇವೆಗಳನ್ನು ನಡೆಸಿದ ಪ್ರಸ್ತುತ ಹರಿದ್ವಾರದ ರಾಮಕೃಷ್ಣಾಶ್ರಮ ಆಸ್ಪತ್ರೆಯಲ್ಲಿ ಪತಂಜಲಿ ಯೋಗಪೀಠದ ಆಚಾರ್ಯ ಬಾಲಕೃಷ್ಣ ಅವರ ವಿಶೇಷ ಮುತುವರ್ಜಿಯಲ್ಕಿ ಅನೇಕ ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿರುವ ತೊಂಭತ್ತಕ್ಕೂ ಅಧಿಕ ಸಾರ್ಥಕ‌ ಅಧ್ಯಾತ್ಮ ಬದುಕು ಸವೆಸಿದ ತಪೋವನೀ ಮಾತಾ ( ಸುಭದ್ರಾ ಮಾತಾಜಿ) ಯವ ಆತ್ಮಕಥೆಯ ಕನ್ನಡ ಅವತರಣಿಕೆ ಭಾನುವಾರ ಹರಿದ್ವಾದಲ್ಕಿ ಲೋಕಾರ್ಪಣೆಗೊಂಡಿತು.

ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಚಾರ್ಯ ಬಾಲಕೃಷ್ಣ ಅವರು ಮಾತಾಜಿಯವರ ಸಮ್ಮುಖದಲ್ಲಿ ಜಂಟಿಯಾಗಿ ಕೃತಿ ಬಿಡುಗಡೆಗೊಳಿಸಿದರು .

ಮೂಲ ಹಿಂದಿಯಲ್ಲಿರುವ ಕೃತಿಯನ್ನು ನಿವೃತ್ತ ಉಪನ್ಯಾಸಕ , ಚಿಂತಕ ಡಾ ಜಿ ಭಾಸ್ಕರ ಮಯ್ಯರು ಅತ್ಯಂತ ಸುಂದರವಾಗಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ . ಕನ್ನಡದ ಜನ ಅದರಲ್ಲುಯ ಉಡುಪಿಯ ಜನತೆಗೆ ಅತ್ಯಂತ ಹೆಮ್ಮೆ ತರಬಲ್ಲ ಸಾಧಕಿ ಸುಭದ್ರಾ ಮಾತಾಜಿಯವರಾಗಿದ್ದಾರೆ . ಅಧ್ತಾತ್ಮ ಸಾಧನೆಯ ತುಡಿತವಿರುವ ಮಂದಿಗೆ ಮತ್ತು ಸಾಹಸಿ ಬುದುಕಿನ ರೋಚಕತೆಯಲ್ಕಿ ಆಸಕ್ತಿ ಇರುವ ಜನರಿಗೆ ಸುಭದ್ರಾ ಮಾತಾಜಿಯವರು ಮಾದರಿಯಾಗಬಲ್ಲರು .

ತಪೋವನೀ ಸುಭದ್ರಾ ಸುಭದ್ರಾ ಮಾತಾ ಧರ್ಮಾರ್ಥ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಮತ್ತು ಮಾತಾಜಿಯವರೊಡನೆ ಸುದೀರ್ಘ ಒಡನಾಟ ಹೊಂದಿ ಶುಶ್ರೂಷೆ ಮಾಡುತ್ತಿರುವ. ಬಹಾದ್ದೂರ್ ಸಿಂಗ್ ವರ್ಮಾ ಶ್ರೀ ಗಳ ಆಪ್ತಕಾರ್ಯದರ್ಶಿಗಳಾದ ವಿಷ್ಣು ಆಚಾರ್ಯ , ಅನಂತ ಜಿ ಎ , ಕೃಷ್ಣ ಭಟ್ , ಹರಿದ್ವಾರ ಪೇಜಾವರ ಶಾಖಾ ಮಠದ ವ್ಯವಸ್ಥಾಪಕ ಮನೋಜ್ , ಅನೂಪ್ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಉಪಸ್ಥಿತರಿದ್ದರು ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿದ್ದರು . ರಾಷ್ಟ್ರೀಯ ಮಹಿಳಾ ಆಯೋಗದ ಪರವಾಗಿ ಸದಸ್ಯೆ ಶಾಮಲಾ ಕುಂದರ್ ಮಾತಾಜಿಯವರಿಗೆ ಗೌರವ ಅರ್ಪಿಸಿದರು .

ಜೀವನಪೂರ್ತಿ ಉಡುಪಿ ಕೃಷ್ಣ ,ಪೇಜಾವರ ಶ್ರೀ ಸ್ಮರಣೆ : ತನ್ನ ಜೀವನದ ಎಲ್ಲ ಕಷ್ಟ ಸವಾಲು ಅಧ್ಯಾತ್ಮ ಸುಖ ಹೀಗೆ ಪ್ರತಿಯೊಂದು ಹಂತದಲ್ಲೂ ಮಾತಾಜಿ ಸ್ಮರಿಸಿದ್ದು , ತನ್ನ ಈ ಪರಿಯ ಸಾಧನೆಯ ಗುಟ್ಟೇನೆಂದು ಹಿಮಾಲಯ ನೂರಾರು ಸಾಧು ಸಂತರು ಹಾಗೂ ಎಲ್ಲರಲ್ಲೂ ಮಾತಾಜಿ ನೀಡಿದ್ದು ಒಂದೇ ಉತ್ತರ ಅದು ನನ್ನ ಸ್ವಾಮಿ ಉಡುಪಿ ಕೃಷ್ಣ ನನ್ನ ಗುರು ಪೇಜಾವರ ಸ್ವಾಮೀಜಿ !!! ಆದ್ದರಿಂದ ನನಗೆ ಯಾವುದೇ ಭಯ ದುಃಖ ಆತಂಕ ಇಲ್ಲ …

ರಾಮಕೃಷ್ಣ ಆಶ್ರಮ ಆಸ್ಪತ್ರೆಯ ಮುಖ್ಯಸ್ಥರಾದ ಡಾ ಧಿಯಾಧಿಪಾನಂದ ಉಪಸ್ಥಿತರಿದ್ದು ಕಾರ್ಯಕ್ರಮದ ಬಗ್ಗೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದರು .

Video:

Facebook Comments

comments