LATEST NEWS
ರಾಜೇಶ್ವರಿ ಶೆಟ್ಟಿ ಮಾಲಕತ್ಪದ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ – ಮೂವರ ಬಂಧನ
ಉಡುಪಿ ಮಾರ್ಚ್ 18: ಉಡುಪಿ ಸಿಟಿಬಸ್ ನಿಲ್ದಾಣ ಸಮೀಪ ಇರುವ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ದಾಳಿ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಶೇಖರ ಶೆಟ್ಟಿ, ಜಾನ್ಸನ್ ಡಿ ಅಲ್ಮೇಡಾ, ಹರ್ಷಿತ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಹೋಮಕುಂಡದಲ್ಲಿ ಗಂಡ ಉದ್ಯಮಿ ಭಾಸ್ಕರ್ ಶೆಟ್ಟಿಯನ್ನು ಸುಟ್ಟು ಹಾಕಿದ್ದ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಯವರಿಗೆ ಸೇರಿರುವ ಲಾಡ್ಜ್ ಇದಾಗಿದೆ. ಗಂಡನ ಹತ್ಯೆ ಪ್ರಕರಣದಲ್ಲಿ ಬೇಲ್ ಪಡೆದು ಹೊರಬಂದಿದ್ದ ರಾಜೇಶ್ವರಿ ಶೆಟ್ಟಿ ಅವರ ಮಾಲಕತ್ವದ ಖಾಸಗಿ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ.
ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ರಾಜೇಶ್ವರಿ ಶೆಟ್ಟಿ ಮೇಲೆ ಕೇಸ್ ದಾಖಲಾಗಿದ್ದು, ರಾಜೇಶ್ವರಿ ಶೆಟ್ಟಿ ಸೇರಿದಂತೆ ಮೂವರ ಬಂಧನ ಬಾಕಿ ಇದೆ. ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.