FILM
ರಾಷ್ಟ್ರಪ್ರಶಸ್ತಿ ವಿಜೇತ ಮಲೆಯಾಳಂ ಖ್ಯಾತ ನಟ ನೆಡುಮುಡಿ ವೇಣು ಇನ್ನಿಲ್ಲ

ಕೇರಳ ಅಕ್ಟೋಬರ್ 11: ಮಲೆಯಾಳಂ ಸಿನೆಮಾ ರಂಗ ಖ್ಯಾತ ನಟ ನೆಡುಮುಡಿ ವೇಣು ಇಂದು ನಿಧನಾಗಿದ್ದಾರೆ. 500ಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿರುವ ಇವರು ಮೂರು ಭಾರೀ ರಾಷ್ಟ್ರ ಪ್ರಶಸ್ತಿ ವಿಜೇತರು.
ಮಲೆಯಾಳಂ ಚಿತ್ರರಂಗ ಖ್ಯಾತ ನಟನನ್ನು ಕಳೆದುಕೊಂಡಿದೆ, ಮಲಯಾಳಂ ಚಿತ್ರರಂಗದಲ್ಲಿ ತಮ್ಮ ನಟನೆಯಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಖ್ಯಾತ ನಟ ನೆಡುಮುಡಿ ವೇಣು (73) ನಿಧನರಾಗಿದ್ದಾರೆ. ಕೋವಿಡ್ -19 ರಿಂದ ಚೇತರಿಸಿಕೊಂಡ ನಂತರ ಅವರು ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ವೇಣು ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟ. ಇವರು ನಾಟಕ ಮತ್ತು 500 ಕ್ಕೂ ಹೆಚ್ಚುಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕ, ಖಳನಾಯಕ ಮತ್ತು ಪಾತ್ರ ನಟನಾಗಿ ತೆರೆಯಲ್ಲಿ ಮಿಂಚಿದ್ದ ವೇಣು, ಗಂಭೀರ ಮತ್ತು ತಮಾಷೆಯ ಪಾತ್ರಗಳಲ್ಲಿ ಸೈ ಎನಿಸಿಕೊಂಡವರು. ತಮ್ಮ ವಿಶಿಷ್ಟ ನಟನಾ ಶೈಲಿ ಮತ್ತು ಪ್ರತಿಭೆಯಿಂದ ವೇಣು ಭಾರತೀಯ ಚಿತ್ರರಂಗದ ನಂಬರ್ ಒನ್ ನಟರಲ್ಲಿ ಒಬ್ಬರಾಗಿದ್ದಾರೆ. ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಆರು ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಾಗಿರುವ ವೇಣು ಕೂಡ ಚಿತ್ರಕಥೆಗಳನ್ನೂ ಬರೆದಿದ್ದಾರೆ.