Connect with us

    FILM

    ಪ್ರಿಯಾಂಕಾ ಚೋಪ್ರಾ ತಂಗಿ ಮನ್ನಾರ ಚೋಪ್ರಾಗೆ ಮಾಧ್ಯಮಗಳ ಮುಂದೆ ಕಿಸ್ ಕೊಟ್ಟ ತೆಲುಗು ನಿರ್ದೇಶಕ

    ಬೆಂಗಳೂರು ಅಗಸ್ಟ್ 30 : ಬಾಲಿವುಡ್ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಅವರ ತಂಗಿ ನಟಿ ಮನ್ನಾರ ಚೋಪ್ರಾ ಅವರಿಗೆ ಮಾದ್ಯಮಗಳ ಮುಂದೆ ತೆಲುಗು ನಿರ್ದೇಶಕ ಕಿಸ್ ಮಾಡಿರುವ ಘಟನೆ ನಡೆದಿದೆ.


    ತೆಲುಗು ನಿರ್ದೇಶಕ ಎ.ಎಸ್‌ ರವಿ ಕುಮಾರ್ ಚೌಧರಿ ನಟಿ ಮನ್ನಾರ ಚೋಪ್ರಾ ಅವರಿಗೆ ಕಿಸ್ ಕೊಟ್ಟಿದ್ದಾರೆ. ಎ.ಎಸ್‌ ರವಿ ನಿದೇರ್ಶಿಸಿರುವ ‘Tiragabadara Saami‘ ತೆಲುಗು ಚಿತ್ರದಲ್ಲಿ ನಟ ರಾಜ್ ತರುಣ್‌ಗೆ ನಾಯಕ ನಟಿಯಾಗಿ ಮನ್ನಾರ ಚೋಪ್ರಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಟೀಸರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಚುಂಬನದ ಘಟನೆ ನಡೆದಿದೆ.


    ಕ್ಯಾಮರಾಗಳಿಗೆ ಪೋಸ್‌ ನೀಡುತ್ತಿದ್ದ ಮನ್ನಾರ ಚೋಪ್ರಾ ಅವರಿಗೆ ಏಕಾಏಕಿ ಬಂದು ರವಿ ಚೌಧರಿ ಚುಂಬಿಸಿದರು. ಈ ವೇಳೆ ಮನ್ನಾರ ಒಂದು ಕ್ಷಣ ಆತಂಕಕ್ಕೆ ಒಳಗಾಗಿರುವಂತೆ ವಿಡಿಯೊದ ದೃಶ್ಯಗಳಲ್ಲಿ ಕಂಡುಬಂದಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಿರ್ದೇಶಕರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ವೃತ್ತಿ ಪರಧಿಯ ಯೆಲ್ಲೇ ಮೀರಬಾರದೆಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಬಾಲಿವುಡ್‌ನ ‘ಜಿದ್‘ ಸಿನಿಮಾದ ಮೂಲಕ ಸಿನಿರಂಗಕ್ಕೆ ಪಾದರ್ಪಣೆ ಮಾಡಿದ ಮನ್ನಾರ ಚೋಪ್ರಾ, ತೆಲುಗು, ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply