Connect with us

    FILM

    ಪ್ರಿಯಾಂಕಾ ಚೋಪ್ರಾರ unread mail ದಾಖಲೆ ಮುರಿಯಲು ಸವಾಲು..!

    ಪ್ರಿಯಾಂಕಾ ಚೋಪ್ರಾರ unread mail ದಾಖಲೆ ಮುರಿಯಲು ಸವಾಲು..!

    ಮುಂಬೈ,ಡಿಸೆಂಬರ್ 09: ಪ್ರಸ್ತುತ ನಂಬರ್ ಒನ್ ಮೋಹಕ ಚೆಲುವೆ ಪಟ್ಟ ಗಿಟ್ಟಿಸಿರುವ ನಟಿ ಪ್ರಿಯಾಂಕ ಚೊಪ್ರಾ ಸಿಕ್ಕಾಪಟ್ಟೆ ಬಿಸಿ.

    ದೇಶ ವಿದೇಶಗಳಲ್ಲಿ ಸದಾ ಸುತ್ತುತ್ತಿರುವ ಈ ಬ್ಯುಸಿ ಇರುವ ನಟಿ ಪ್ರಿಯಾಂಕ ಚೋಪ್ರಾಗೆ ಇ-ಮೇಲ್‌ ಓದಲು ಪುರಸೊತ್ತಾದರೂ ಎಲ್ಲಿ ಇದೆ ? ಪ್ರಿಯಾಂಕರ ಇ-ಮೇಲ್‌ ಇನ್‌ ಬಾಕ್ಸ್‌ನಲ್ಲಿ ಓದದೆ ಉಳಿದಿರುವ ಸಂದೇಶಗಳು ಬರೋಬ್ಬರಿ 2,57,623..!!.

    ಪ್ರಸ್ತುತ ಪ್ರಿಯಾಂಕಾ ಅಭಿನಯಿಸುತ್ತಿರುವ ಜನಪ್ರಿಯ ಅಮೆರಿಕ ಟೀವಿ ಶೋ “ಕ್ವಾಂಟಿಕೋ’ದಲ್ಲಿ ಅವರ ಸಹ ನಟನಾಗಿರುವ ಅಲನ್‌ ಪೋವೆಲ್‌ ಪ್ರಿಯಾಂಕಾರ ಫೋನಿನ ಚಿತ್ರದೊಂದಿಗೆ ಈ ಕುರಿತು ಟ್ವೀಟ್‌ ಮಾಡಿದ್ದಾರೆ.

    ಜೊತೆಗೆ “ಹುಡುಗರೇ ಪ್ರಿಯಾಂಕಾಗೆ ಇ-ಮೇಲ್‌ ಮಾಡಬೇಡಿ. ಅವರು ಅದನ್ನು ಓದುವುದಿಲ್ಲ ಮತ್ತು ನಿಮಗೆಲ್ಲಾ ಒಂದು ಸವಾಲು.

    ಅನ್‌ರಿಡ್‌ ಸಂದೇಶಗಳನ್ನು ಇರಿಸಿಕೊಳ್ಳುವುದರಲ್ಲಿ ಪ್ರಿಯಾಂಕಾರ ದಾಖಲೆ ಮುರಿಯಿರಿ’ ಎಂದು ಅಡಿಬರಹ ಕೂಡ ಬರೆದಿದ್ದಾರೆ. ಈ ಟ್ವೀಟ್ ಇದೀಗ ಭಾರಿ ವೈರಲ್ ಆಗಿದೆ.

    ಬಾಲಿವುಡ್‌ ಮಾತ್ರವಲ್ಲದೆ, ಹಾಲಿವುಡ್‌ನಲ್ಲೂ ಮಿಂಚಿ ಹೆಸರು ಮಾಡಿರುವ ಪ್ರತಿಭಾವಂತ ನಟಿ ಪ್ರಿಯಾಂಕ ಚೋಪ್ರಾ ಈ ವರ್ಷದ ಸೆಕ್ಸಿಯೆಸ್ಟ್‌ ಏಷ್ಯನ್‌ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.

    5ನೇ ಬಾರಿಗೆ ಅವರು ಈ ಹೆಗ್ಗಳಿಕೆಗೆ ಪಾತ್ರವಾಗುತ್ತಿರುವುದು ಇನ್ನೊಂದು ದಾಖಲೆಯಾಗಿದೆ.

    ಲಂಡನ್‌ನ ಈಸ್ಟರ್ನ್‌ ಐ ಎಂಬ ವೀಕ್ಲಿ ನ್ಯೂಸ್‌ಪೇಪರ್‌ ಸಿದ್ಧಪಡಿಸಿರುವ 50 ಸೆಕ್ಸಿಯೆಸ್ಟ್‌ ಏಷ್ಯನ್‌ ವುಮನ್‌ ಲಿಸ್ಟ್‌ನಲ್ಲಿ ಪ್ರಿಯಾಂಕ ಚೋಪ್ರಾ ಅಗ್ರ ಸ್ಥಾನದಲ್ಲಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply