Connect with us

LATEST NEWS

ಮುಳುಗಡೆಯಾದ ಹಡಗುಗಳ ಸಾಲಿಗೆ ಮತ್ತೊಂದು ಸೇರ್ಪಡೆ… ಸಂಪೂರ್ಣ ಮುಳುಗಿ ಪ್ರಿನೆಸ್ಸ್ ಮಿರಾಲ್ ಹಡಗು….!!

ಮಂಗಳೂರು ಜೂನ್ 24: ಉಳ್ಳಾಲ ಅರಬ್ಬೀ ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿ ಲಂಗರು ಹಾಕಿದ್ದ ಪ್ರಿನೆಸ್ ಮಿರಾಲ್ ಹೆಸರಿ ಸರಕು ಹಡುಗು ಇದೀಗ ಸಂಪೂರ್ಣವಾಗಿ ಮುಳುಗಡೆಯಾಗಿದೆ.


ಹಡಗಿನಲ್ಲಿ ಉಂಟಾದ ರಂಧ್ರದಿಂದ ನೀರು ನುಗ್ಗಿ ಈ ಹಡಗು ಅಪಾಯದಲ್ಲಿ ಸಿಲುಕಿತ್ತು. ಈ ಕೂಡಲೇ ಕಾರ್ಯಾಚರಣೆ ನಡೆಸಿದ ಕೋಸ್ಟ್‌ಗಾರ್ಡ್‌ ಸಿಬಂದಿ 15 ಮಂದಿಯನ್ನು ರಕ್ಷಿಸಿದ್ದರು. ಕಳೆದೆರಡು ದಿನಗಳಿಂದ ನಿಧಾನವಾಗಿ ಮುಳುಗುತ್ತಿದ್ದ ನೌಕೆ ಗುರುವಾರ ಪೂರ್ತಿ ಮುಳುಗಿದ್ದು, ಅದರ ಕ್ರೇನ್‌ಗಳು ಮಾತ್ರವೇ ಗೋಚರವಾಗುತ್ತಿವೆ.


ಸಮುದ್ರ ತೀರಾ ಪ್ರಕ್ಷುಬ್ಧ ಸ್ಥಿತಿಯಲ್ಲಿ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಹಡಗಿನ ರಂಧ್ರ ಮುಚ್ಚುವ ಯಾವುದೇ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿಲ್ಲ. ಹಡಗಿನ ಮಾಲಕರು ನಿಯೋಜಿಸಿರುವ ಸ್ಮಿತ್‌ ಸಾಲ್ವೇಜ್‌ ಏಜೆನ್ಸಿಯವರು ಮಂಗಳೂರಿಗೆ ಗುರುವಾರ ಆಗಮಿಸಿದ್ದು ಹಡಗಿನ ಪ್ರಾಥಮಿಕ ತಪಾಸಣೆ ನಡೆಸಿದ್ದಾರೆ. ಜಿಲ್ಲಾಡಳಿತದ ಪರವಾಗಿ ಮಂಗಳೂರು ಸಹಾಯಕ ಆಯುಕ್ತರು ಮತ್ತು ಕೋಸ್ಟ್‌ಗಾರ್ಡ್‌ ಡಿಐಜಿ ಏಜೆನ್ಸಿಯವರೊಂದಿಗೆ ಹಡಗು ಮುಳುಗಿರುವ ಜಾಗಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಹಡಗಿನಿಂದ ತೈಲ ಸೋರಿಕೆಯಾಗದಂತೆ ಅದರ ಸುತ್ತಲೂ ಆಯಿಲ್‌ ಬೂಮ್‌ಗಳನ್ನು ಅಳವಡಿಸಲಾಗಿದೆ. ಹಾಗಾಗಿ ತೈಲ ಸೋರಿಕೆಯ ಭೀತಿ ಇಲ್ಲ. ಆದರೂ ಅದರಲ್ಲಿರುವ ತೈಲ ಹಾಗೂ 8,000 ಟನ್‌ ಸೀrಲ್‌ ಕಾಯಿಲ್‌ಗ‌ಳನ್ನು ತೆರವು ಮಾಡುವ ವಿಧಾನದ ಬಗ್ಗೆ ಸ್ಮಿತ್‌ ಸಾಲ್ವೇಜ್‌ ಏಜೆನ್ಸಿಯವರು ಕಾರ್ಯ ತಂತ್ರ ರೂಪಿಸುವ ಸಾಧ್ಯತೆ ಇದೆ.

Advertisement
Click to comment

You must be logged in to post a comment Login

Leave a Reply