Connect with us

    LATEST NEWS

    ಪ್ರಧಾನಿ ಮೋದಿ ಅವರ ವಾಸ್ತವ್ಯಕ್ಕೆ ಮಂಗಳೂರಿನಲ್ಲಿ ಭವ್ಯ ಸಿದ್ದತೆ : ಎಲ್ಲೆಡೆ ಕಟ್ಟೆಚ್ಚರ

    ಪ್ರಧಾನಿ ಮೋದಿ ಅವರ ವಾಸ್ತವ್ಯಕ್ಕೆ ಮಂಗಳೂರಿನಲ್ಲಿ ಭವ್ಯ ಸಿದ್ದತೆ : ಎಲ್ಲೆಡೆ ಕಟ್ಟೆಚ್ಚರ

    ಮಂಗಳೂರು,ಡಿಸೆಂಬರ್ 18 : ಒಖೀ ಚಂಡಮಾರುತ ದಿಂದ ಹಾನಿಗೀಡಾಗಿರುವ ಲಕ್ಷದ್ವೀಪಕ್ಕೆ ನಾಳೆ ಮಂಗಳವಾರ ಭೇಟಿ ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ ಮಂಗಳೂರು ನಗರಕ್ಕೆ ಆಗಮಿಸಲಿದ್ದಾರೆ.

    ರಾತ್ರಿ 11.30 ಗಂಟೆಗೆ ವಿಶೇಷ ವಿಮಾನದಲ್ಲಿ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾ ಣಕ್ಕೆ ಬಂದಿಳಿಯುವ ಪ್ರಧಾನಿ, ಅಲ್ಲಿಂದ ನೆರವಾಗಿ ಕದ್ರಿಯಲ್ಲಿರುವ ಸರ್ಕ್ಯೂಟ್‌ ಹೌಸ್‌ಗೆ ಬಂದು ತಂಗುವರು.

    ನಾಳೆ ಮಂಗಳವಾರ ಬೆಳಗ್ಗೆ  ಮಂಗಳೂರಿನಿಂದ ಲಕ್ಷದ್ವೀಪದ ಅಗಥಿ ದ್ವೀಪಕ್ಕೆ ವಿಶೇಷ ವಾಯುಪಡೆಯ ಹೆಲಿಕಾಪ್ಟರ್ ನಲ್ಲಿ ತೆರಳಿ ಅಲ್ಲಿ ಓಖೀ ಚಂಡಮಾರುತದಿಂದ ಹಾನಿಗೀಡಾದ ಪ್ರದೇಶಗಳಿಗೆ ತೆರಳಿ ವೀಕ್ಷಣೆ ಮಾಡಿ ಸಂತ್ರಸ್ತರನ್ನು ಭೇಟಿಯಾಗಲಿದ್ದಾರೆ.

    ಲಕ್ಷದ್ವೀಪದ ಬಳಿಕ ಕೇರಳದ ತಿರುವನಂತಪುರ ಮತ್ತು ತಮಿಳುನಾಡಿನ ಕನ್ಯಾಕುಮಾರಿಗೆ ಪ್ರಧಾನಿ ಭೇಟಿ ನೀಡುವರು.

    ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು ಭೇಟಿ ಮತ್ತು ವಾಸ್ತವ್ಯದ ಹಿನ್ನೆಲೆಯಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ನಡೆಸಲಾಗುತ್ತಿದೆ.

    ಪ್ರಧಅನಿ ಅವರು ಉಳಕೊಳ್ಳಲಿರುವ ನಗರದ ಕದ್ರಿಯ ಸರ್ಕ್ಯೂಟ್  ಹೌಸ್ ನ್ನು ಸಿದ್ದಪಡಿಸಲಾಗಿದೆ. ಸರ್ಕಿಟ್ ಹೌಸ್ ಸುತ್ತಮುತ್ತ ಎಲ್ಲಾ ಚಟುವಟಿಕೆಗಳು, ಹಾಗೂ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

    ಸರ್ಕಿಟ್ ಹೌಸನ್ನು ಪ್ರಧಾನಿ ಅವರ ಭಧ್ರತೆಯ ಜವಾಬ್ದಾರಿ ಹೊತ್ತ ಎನ್ ಎಸ್ ಜಿ ಅವರು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ.

    ಇಲ್ಲಿಯೇ ಪ್ರಧಾನಿ ಅವರ ವಿಶೆಷ ತಾತ್ಕಾಲಿಕ ಕಚೇರಿಯನ್ನು ತೆರೆಯಲಾಗಿದೆ.ವಿಮಾನ ನಿಲ್ದಾಣದಿಂದ ಸರ್ಕಿಟ್ ಹೌಸ್ ಗೆ ಪ್ರಯಾಣಿಸಲು ಮೂರು ಗುಂಡು ನಿರೋಧಕ ಕಾರುಗಳು ಮಂಗಳೂರಿಗೆ ಆಗಮಿಸಿವೆ.

    ಇದಕ್ಕೆ ಬೇಕಾದ ಕಂಪ್ಯೂಟರಗಳು, ಫ್ಯಾಕ್ಸ್ ಮಶೀನ್, ಪ್ರಿಂಟರ್ ಅಳವಡಿಸಲಾಗಿದೆ. ಪ್ರಧಾನಿ ಅವರು ಇಲ್ಲಿರುಷ್ಟು ಸಮಯ ಇದು ಅವರ ಅಧಿಕೃತ ಪ್ರಧಾನಿ ಕಾರ್ಯಾಲಯವಾಗಿ ಕಾರ್ಯ ನಿರ್ವಹಿಸಲಿದೆ.

    ಭದ್ರತೆಯ ದೃಷ್ಟಿಯಿಂದ ಸರ್ಕಿಟ್ ಸುತ್ತ ಮುತ್ತ ಸಿಸಿಟಿವಿಗಳ ಅಳವಡಿಕೆ, ವಿದ್ಯುತ್ ದೀಪಗಳು, ಜನರೇಟರ್ ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

    ಶಿಷ್ಟಚಾರವಾಗಿ ಪ್ರಧಾನಿ ಭೇಟಿ ಸಂದರ್ಭ ಉಪಸ್ಥಿತರಿರಲು ರಾಜ್ಯ ಪೋಲಿಸ್ ಮಹ ನಿರ್ದೇಶಕರಾದ ನೀಲಮಣಿ ಎನ್. ರಾಜು ಹಾಗೂ ಎಡಿಜಿಪಿ ಕಮಲ್ ಪಂತ್ ಅವರು ನಗರಕ್ಕೆ ಅಗಮಿಸಿದ್ದಾರೆ.

    ಬಿಜೆಪಿಯ ಹಿರಿಯ ನಾಯಕರು ಈಗಾಗಲೇ ನಗರಲ್ಲಿದ್ದು, ಪ್ರಧಾನಿ ಅವರ ಭವ್ಯ ಸ್ವಾಗತಕ್ಕೆ ಸಿದ್ದತೆಗಳನ್ನು ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply