Connect with us

LATEST NEWS

ಇಂದು ಪ್ರಧಾನಿ ಮೋದಿ ” ಮನ್ ಕಿ ಬಾತ್” 68ನೇ ಸರಣಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರನ್ನುದ್ದೇಶಿಸಿ ‘ ಮನ್ ಕಿ ಬಾತ್’ ರೆಡಿಯೊ ಕಾರ್ಯಕ್ರಮದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಮಾತನಾಡಲಿದ್ದಾರೆ.
ಪ್ರತಿ ತಿಂಗಳು ನಡೆಸುವ ಈ ಕಾರ್ಯಕ್ರಮದ 68ನೇ ಸರಣಿ ಇದಾಗಿದ್ದು, ಈ ಸಂಬಂಧ ಜನರು ತಮ್ಮ ಸಲಹೆಗಳನ್ನು ನೀಡುವಂತೆ ಅವರು ಆಗಸ್ಟ್‌ 18ರಂದು ಮನವಿ ಮಾಡಿದ್ದರು.

ಕಾರ್ಗಿಲ್‌ ವಿಜಯದ ದಿನವೇ ನಡೆದ 67ನೇ ಕಾರ್ಯಕ್ರಮದ ವೇಳೆ ಪಾಕಿಸ್ತಾನ ವಿರುದ್ಧ ಕಿಡಿಕಾರಿದ್ದ ಮೋದಿ, ಭಾರತದ ನೆಲವನ್ನು ಅತಿಕ್ರಮಿಸುವ ಮತ್ತು ತನ್ನ ದೇಶದಲ್ಲಿನ ಆಂತರಿಕ ಸಂಘರ್ಷವನ್ನು ಬೇರೆಡೆಗೆ ತಿರುಗಿಸುವ ಯೋಜನೆ ರೂಪಿಸುತ್ತಿದೆ ಎಂದು ಟೀಕಿಸಿದ್ದರು.

ಭಾರತದ ಸೌಹಾರ್ದ ಪ್ರಯತ್ನಗಳಿಗೆ ಬದಲಾಗಿ ಪಾಕಿಸ್ತಾನ ಬೆನ್ನಿಗೆ ಚೂರಿಹಾಕಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಕಾರ್ಗಿಲ್‌ ಯುದ್ಧದಲ್ಲಿ ಶೌರ್ಯ ಪ್ರದರ್ಶಿಸಿದ ಯೋಧರ ಕಥೆಗಳನ್ನು ಹಂಚಿಕೊಳ್ಳುವಂತೆ ದೇಶದ ಯುವಕರಿಗೆ ಕರೆ ನೀಡಿದ್ದರು.
2014ರ ಅಕ್ಟೋಬರ್‌ನಲ್ಲಿ ಮನದ ಮಾತಿನ ಮೊದಲ ಕಾರ್ಯಕ್ರಮ ಪ್ರಸಾರಗೊಂಡಿತ್ತು. ತಿಂಗಳ ಕೊನೆಯ ಭಾನುವಾರ ಮನದ ಮಾತು ಕಾರ್ಯಕ್ರಮವು ಆಲ್‌ ಇಂಡಿಯಾ ರೇಡಿಯೊ ಹಾಗೂ ದೂರದರ್ಶನದಲ್ಲಿ ಪ್ರಸಾರವಾಗುತ್ತದೆ.

Facebook Comments

comments