DAKSHINA KANNADA
ಮತ ಚಲಾಯಿಸಲು ಹಠ ಹಿಡಿದು ಮತ ಚಲಾವಣೆ ಮಾಡಿದ ತುಂಬು ಗರ್ಭಿಣಿ
ಮತ ಚಲಾಯಿಸಲು ಹಠ ಹಿಡಿದು ಮತ ಚಲಾವಣೆ ಮಾಡಿದ ತುಂಬು ಗರ್ಭಿಣಿ
ಪುತ್ತೂರು ಎಪ್ರಿಲ್ 18: ಮೋದಿಗಾಗಿ ನಾನು ಮತ ಚಲಾಯಿಸಬೇಕೆಂದು ಹಠ ಹಿಡಿದ ತುಂಬು ಗರ್ಭಿಣಿಯೋರ್ವರು ಹೆರಿಗೆಗೆಂದು ಆಸ್ಪತ್ರೆಯಲ್ಲಿ ದಾಖಲಾದರೂ ಪತಿಯ ಸಹಾಯದೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿ ಮತ್ತೆ ಆಸ್ಪತ್ರೆಗೆ ಸೇರಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಉರ್ಲಾಂಡಿ ಬೂತ್ 119ರಲ್ಲಿ ನಡೆದಿದೆ.
ಉರ್ಲಾಂಡಿ ನಿವಾಸಿ ಯೋಗಾನಂದ ಅವರ ಪತ್ನಿ ಮೀನಾಕ್ಷಿ ಅವರು ತುಂಬು ಗರ್ಭಿಣಿಯಾಗಿದ್ದು ಇಂದು ಬೆಳಿಗ್ಗೆ ಹೊಟ್ಟೆ ನೋವು ಎಂದು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನೇನೂ ಹೆರಿಗೆಯಾಗುವ ಸಾಧ್ಯತೆ ಎನ್ನುವಷ್ಟರಲ್ಲಿ ಮೊದಲು ತನ್ನ ಹಕ್ಕು ಚಲಾಯಿಸಬೇಕು.
ಮೋದಿಗಾಗಿ ನನ್ನ ಮತ ಹಾಳಗಾದಿರಲಿ ಎಂದು ಪತಿ ಯೋಗಾನಂದ ಸಹಾಯದಲ್ಲಿ 119 ಮತಗಟ್ಟೆ ಇರುವ ತಾಲೂಕು ಪಂಚಾಯತ್ ಕಚೇರಿಯಲ್ಲಿ ಮತ ಚಲಾಯಿಸಿ ಬಳಿಕ ಆಸ್ಪತ್ರೆಗೆ ಸೇರಿದರು. ಆಸ್ಪತ್ರೆಗೆ ಸೇರಿದ ಕೆಲವೆ ನಿಮಿಷದಲ್ಲಿ ಅವರಿಗೆ ಹೆರಿಗೆಯೂ ಆಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.