Connect with us

    LATEST NEWS

    ಬಸ್ ಡ್ರೈವರ್ ಒಬ್ಬರ ಮತದಾನದ ರೀತಿ ವೈರಲ್ ಆದ ವಿಡಿಯೋ

    ಬಸ್ ಡ್ರೈವರ್ ಒಬ್ಬರ ಮತದಾನದ ರೀತಿ ವೈರಲ್ ಆದ ವಿಡಿಯೋ

    ಮಂಗಳೂರು ಎಪ್ರಿಲ್ 19: ಮಂಗಳೂರಿನ ಖಾಸಗಿ ಬಸ್ ಚಾಲಕರೊಬ್ಬರು ತಮ್ಮ ಮತ ಚಲಾಯಿಸಿದ ರೀತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ನಿನ್ನೆ ನಡೆದ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಸಂದರ್ಭ ಮಂಗಳೂರು – ಶಿವಮೊಗ್ಗ ಮಾರ್ಗದ ಬಸ್ಸಿನ ಚಾಲಕರಾದ ವಿಜಯ್ ಶೆಟ್ಟಿ ಅವರು ಮೂಡುಬಿದಿರೆ ಸಮೀಪ ಬೆಳುವಾಯಿ ಗ್ರಾಮದಲ್ಲಿ ತನ್ನ ಮತವನ್ನು ಚಲಾಯಿಸಿದ್ದಾರೆ .

    ಆದರೆ ವಿಜಯ್ ಶೆಟ್ಟಿ ಅವರು ಮತ ಚಲಾಯಿಸಿದ ರೀತಿ ಮಾತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಸ್ ನ ಕರ್ತವ್ಯದಲ್ಲಿರುವಾಗಲೇ ತಮ್ಮ ಮತಗಟ್ಟೆಯಲ್ಲಿ ಬಸ್ ನಿಲ್ಲಿಸಿ ಮತದಾನ ಮಾಡಲು ಓಡಿ ಹೋಗಿ ಮತದಾನ ಮಾಡಿ ಮತ್ತೆ ಓಡಿ ಬಂದು ಬಸ್ ಚಾಲನೆ ಮಾಡಿದ್ದಾರೆ. ಬಸ್ ಡ್ರೈವರ್ ವಿಜಯ್ ಶೆಟ್ಟಿ ಅವರ ಬದ್ದತೆಗೆ ಸಾಮಾಜಿ ಜಾಲತಾಣಗಳಲ್ಲಿ ಅಭಿನಂದನೆಗಳು ಹರಿದು ಬಂದಿದೆ.

    ನಿನ್ನೆ ನಡೆದ ಲೋಕಸಭಾ ಚುನಾವಣೆಯ ಮತದಾನದಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಗರಿಷ್ಠ ಮತದಾನ ದಾಖಲಾಗಿದೆ. ಬೆಂಗಳೂರಿನಂತಹ ಅತ್ಯಂತ ಸುಶಿಕ್ಷಿತರಿರುವ ನಗರದಲ್ಲಿ ಕಡಿಮೆ ಮತದಾನ ದಾಖಲಾಗಿದ್ದು, ಕಾಂಗ್ರೇಸ್ ಸಂಸದರಾಗಿರುವ ಉಗ್ರಪ್ಪ ಅವರು ತಮ್ಮ ಚಲಾಯಿಸದೇ ಬಳ್ಳಾರಿಯಲ್ಲೇ ಉಳಿದು ಕೊಂಡಿದ್ದು. ಇಂತಹವರು ಬಸ್ ಡ್ರೈವರ್ ವಿಜಯ್ ಶೆಟ್ಟಿ ಅವರಿಂದ ಮತದಾನದ ಮಹತ್ವ ಕಲಿಯಬೇಕಾಗಿದೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply