Connect with us

FILM

ಮಲೆಯಾಳಂ ಚಿತ್ರರಂಗಕ್ಕೆ ಮತ್ತೊಂದು ಅಘಾತ – 8 ತಿಂಗಳ ಗರ್ಭಿಣಿ ನಟಿ ಹೃದಯಾಘಾತದಿಂದ ನಿಧನ

ಕೇರಳ ನವೆಂಬರ್ 01: ನಟಿ ರೆಂಜೂಷಾ ಮೆನನ್ ಅವರ ಆಘಾತಕಾರಿ ಸಾವಿನ ಎರಡು ದಿನಗಳ ನಂತರ , ಮಲಯಾಳಂ ಮತ್ತೊಬ್ಬಳು ಕಿರುತೆರೆ ನಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 8 ತಿಂಗಳ ಗರ್ಭಿಣಿಯಾಗಿರುವ ಡಾ. ಪ್ರಿಯಾ ಮೃತ ಕಿರುತೆರೆ ನಟಿ. ಪ್ರಿಯಾ ಅವರು ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಕಿರುತೆರೆಯಲ್ಲಿ ಬೇಡಿಕೆಯ ನಟಿಯಾಗಿದ್ರು. ಮದುವೆಯ ಬಳಿಕ ನಟನೆಗೆ ಪ್ರಿಯಾ ಬ್ರೇಕ್ ನೀಡಿದ್ದರು. 35ನೇ ವಯಸ್ಸಿನ ಪ್ರಿಯಾ, 8 ತಿಂಗಳ ತುಂಬು ಗರ್ಭಿಣಿಯಾಗಿದ್ದರು. ಎಂದಿನಂತೆ ಹೆಲ್ತ್ ಚೆಕಪ್‌ಗೆ ಖಾಸಗಿ ಆಸ್ಪತ್ರೆಗೆ ಹೋದಾಗ ನಟಿಗೆ ಹೃದಯಾಘಾತವಾಗಿದೆ. ನವಜಾತ ಶಿಶುಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ನಟ ಕಿಶೋರ್ ಸತ್ಯ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತಮ್ಮ ಅಭಿಮಾನಿಗಳಿಗೆ ಹೃದಯವಿದ್ರಾವಕ ಸುದ್ದಿಯನ್ನು ತಿಳಿಸಿದ್ದಾರೆ. ”ಮಲಯಾಳಂ ಕಿರುತೆರೆ ವಲಯದಲ್ಲಿ ಮತ್ತೊಂದು ಅನಿರೀಕ್ಷಿತ ಸಾವು. ಡಾ.ಪ್ರಿಯಾ ನಿನ್ನೆ ಹೃದಯಾಘಾತದಿಂದ ನಿಧನರಾದರು. ಆಕೆ 8 ತಿಂಗಳ ಗರ್ಭಿಣಿಯಾಗಿದ್ದಳು. ಮಗು ಐಸಿಯುನಲ್ಲಿದೆ. ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ,” ಎಂದು ಬರೆದಿದ್ದಾರೆ.

ಡಾ. ಪ್ರಿಯಾ ಮಲಯಾಳಂ ಕಿರುತೆರೆಯಲ್ಲಿ ಚಿರಪರಿಚಿತರಾಗಿದ್ದರು ಮತ್ತು ‘ಕರುತಮುತ್ತು’ ಚಿತ್ರದ ಪಾತ್ರಕ್ಕಾಗಿ ಜನಪ್ರಿಯರಾಗಿದ್ದರು, ಆದರೆ ಮದುವೆಯಾದ ನಂತರ ನಟನೆಯಿಂದ ವಿರಾಮ ಪಡೆದರು. ಅವಳು ವೈದ್ಯೆಯೂ ಆಗಿದ್ದಳು. ಸ್ಥಳೀಯ ವರದಿಗಳ ಪ್ರಕಾರ, ಆಕೆ ಎಂಡಿ ವ್ಯಾಸಂಗ ಮಾಡುತ್ತಿದ್ದಳು ಮತ್ತು ತಿರುವನಂತಪುರಂನ ಪಿಆರ್‌ಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಒಬ್ಬಳೇ ಮಗಳಾಗಿರುವ ಪ್ರಿಯಾಳ ಸಾವು ಕಂಡು ತಾಯಿ ಆಘಾತಕ್ಕೆ ಒಳಗಾಗಿದ್ದಾರೆ. ಇದೀಗ ಪ್ರಿಯಾ ನಿಧನಕ್ಕೆ ನಟ ಕಿಶೋರ್ ಸತ್ಯ ಸೇರಿದಂತೆ ಅನೇಕ ಕಿರುತೆರೆ ನಟ-ನಟಿಯರು ಕಂಬಿನಿ ಮಿಡಿದಿದ್ದಾರೆ.

Share Information
Advertisement
Click to comment

You must be logged in to post a comment Login

Leave a Reply