LATEST NEWS
ಮಳೆಗಾಗಿ ನೇತ್ರಾವತಿ ನದಿಯಲ್ಲಿ ವರುಣ ಹೋಮ

ಮಳೆಗಾಗಿ ನೇತ್ರಾವತಿ ನದಿಯಲ್ಲಿ ವರುಣ ಹೋಮ
ಮಂಗಳೂರು ಜೂನ್ 6: ಕುಡಿಯುವ ನೀರಿನ ತೀವ್ರ ಬರ ಅನುಭವಿಸುತ್ತಿರುವ ಕರಾವಳಿ ಜಿಲ್ಲೆಗಳಲ್ಲಿ ಮಳೆಗಾಗಿ ದೇವರ ಮೋರೆ ಹೋಗಲಾಗುತ್ತಿದೆ. ತೀವ್ರ ಬರಗಾಲದಿಂದ ತತ್ತರಿಸಿ ಹೋಗಿರುವ ಕರಾವಳಿಯಲ್ಲಿ ಈ ಹೋಮ ಹವನಗಳ ಮೂಲಕ ಮಳೆಗಾಗಿ ಪ್ರಾರ್ಥಿಸಲಾಗುತ್ತಿದೆ.
ನೇತ್ರಾವತಿ ನದಿ ಮತ್ತು ಮೃತ್ಯುಂಜಯ ಹೊಳೆ ಸಂಗಮವಾಗುವ ಧರ್ಮಸ್ಥಳ ಬಳಿಯ ಕಲ್ಮಂಜದ ಪಜಿರಡ್ಕ ಎಂಬಲ್ಲಿ ವರುಣ ಹೋಮ ಮಾಡಲಾಗಿದೆ.

ಬೆಂಗಳೂರಿನ ಜೋಡಿ ಮುನೇಶ್ವರ ದೇವಸ್ಥಾನದ ತಂಡ ನದಿಯಲ್ಲಿ ಪೂಜೆ ಮಾಡುತ್ತಿದ್ದು, ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆ ತನಕ ಹೋಮ ಮಾಡಲಾಗಿದೆ.
ಪಜಿರಡ್ಕ ದ ಸದಾಶಿವ ರುದ್ರ ದೇವಸ್ಥಾನದ ಆಡಳಿತ ಮಂಡಳಿ ತಂಡಕ್ಕೆ ಸಾಥ್ ನೀಡಿದ್ದು,ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ.
ಬರಗಾಲದಿಂದ ನೇತ್ರಾವತಿ ನದಿ ಬತ್ತಿ ಹೋಗಿದ್ದು, ಈಗ ನೇತ್ರಾವತಿ ನದಿಯಲ್ಲೇ ವರುಣ ಹೋಮ ನಡೆಸಿದ್ದು, ವರುಣ ದೇವ ಕೃಪೆ ತೋರುವಂತೆ ಪ್ರಾರ್ಥನೆ ಮಾಡಿದ್ದಾರೆ.
ರಾಜ್ಯ ಸರ್ಕಾರದ ವತಿಯಿಂದ ಮಳೆಗಾಗಿ ಪ್ರಾರ್ಥಿಸಲು ಪುಣ್ಯಕ್ಷೇತ್ರ, ದೇಗುಲಗಳಲ್ಲಿ ವಿಶೇಷ ಪೂಜೆಯನ್ನು ಇಂದು ಹಮ್ಮಿಕೊಳ್ಳಲಾಗಿತ್ತು. ಈಗಾಗಲೇ ಹವಮಾನ ಇಲಾಖೆ ಮುಂಗಾರು ಕರ್ನಾಟಕ್ಕೆ ಆಗಮನ ವಿಳಂಭವಾಗಲಿದೆ ಎಂದು ಮುನ್ಸೂಚನೆ ನೀಡಿದೆ.