ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆದಾಯದಲ್ಲಿ ಭಾರಿ ಕುಸಿತ

ಪುತ್ತೂರು ಜೂನ್ 6: ದಕ್ಷಿಣ ಭಾರತದ ಹೆಸರಾಂತ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಆದಾಯದಲ್ಲಿ ಕುಸಿತ ಕಂಡಿದೆ. ಕಳೆದ ಸಾಲಿನ ಆದಾಯಕ್ಕಿಂತ ಸುಮಾರು 3.83 ಕೋಟಿ ರೂಪಾಯಿ ಆದಾಯ ಕುಸಿತವಾಗಿದೆ.

ದಕ್ಷಿಣ ಭಾರತದ ಹೆಸರಾಂತ ನಾಗ ಕ್ಷೇತ್ರ ಕುಕ್ಕೆಸುಬ್ರಹ್ಮಣ್ಯ ಕರ್ನಾಟಕ ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಅತ್ಯಂತ ಅಧಿಕ ಆದಾಯ ತರುವ ದೇವಾಲವಾಗಿದೆ. ಮುಜರಾಯಿ ಇಲಾಖೆ ಅಧೀನದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಈ ಸಾಲಿನ ವಾರ್ಷಿಕ ಆದಾಯ 92.09 ಕೋಟಿ ರೂಪಾಯಿ ಆಗಿದ್ದು. ಕಳೆದ ವರ್ಷದ ಆದಾಯ ಸುಮಾರು 95.92 ಕೋಟಿ ವಾರ್ಷಿಕ ಆದಾಯ ದಾಖಲಾಗಿತ್ತು.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ದೇವಸ್ಥಾನದ ಆದಾಯದಲ್ಲಿ ಸುಮಾರು 3.83 ಕೋಟಿ ಕುಸಿತ ಕಂಡಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಠೇವಣಿ ಇರಿಸಿದ ಹಣಕ್ಕೆ ಬಡ್ಡಿ ಸಿಗದೆ ಇರುವುದು ಹಾಗೂ ಕಳೆದ ಮಳೆಗಾಲದಲ್ಲಿ ಹೆದ್ದಾರಿ, ರಸ್ತೆ ಸಂಚಾರ ಅಡಚಣೆ, ಪ್ರಾಕೃತಿಕ ವಿಕೋಪಗಳಿಂದ ಸಂಚಾರ ವ್ಯತ್ಯಯಗೊಂಡು ಯಾತ್ರಾರ್ಥಿಗಳ ಕೊರತೆ ಆದಾಯ ಕುಸಿತಕ್ಕೆ ಮುಖ್ಯ ಕಾರಣಗಳು ಎಂದು ಅಂದಾಜಿಸಲಾಗಿದೆ.

0 Shares

Facebook Comments

comments