LATEST NEWS
ಸಮುದ್ರದಲ್ಲಿ ಮೀನುಗಾರರ ಹಲ್ಲೆ ಪ್ರಕರಣ – ಕಾನೂನು ಕ್ರಮಕ್ಕೆ ಪ್ರಮೋದ್ ಮಧ್ವರಾಜ್ ಒತ್ತಾಯ
ಉಡುಪಿ ಫೆಬ್ರವರಿ 16: ಮೀನುಗಾರಿಕೆಗೆ ತೆರಳಿದ್ದ ರಾಜ್ಯ ಮೀನುಗಾರರ ಮೇಲೆ ಅನ್ಯ ರಾಜ್ಯದ ಮೀನುಗಾರರು ನಡೆಸಿರುವ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಒತ್ತಾಯಿಸಿದ್ದಾರೆ.
ಫೆಬ್ರವರಿ 8ರಂದು ಕನ್ಯಾಕುಮಾರಿ ನೇರವಾಗಿ 50 ನಾಟಿಕಲ್ ಮೈಲು ದೂರದಲ್ಲಿ ಆಳ ಸಮುದ್ರ ಮೀನುಗಾರಿಕೆ ಮಾಡುತ್ತಿದ್ದ ರಾಜ್ಯದ ಮೀನುಗಾರರ ಬೋಟ್‌ಗಳನ್ನು ಸುತ್ತುವರಿದ ಅನ್ಯ ರಾಜ್ಯಗಳ ಮೀನುಗಾರರು ಹಲ್ಲೆ ನಡೆಸಿದ್ದಾರೆ. ಬೋಟುಗಳಿಗೆ ಹಾನಿ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳನ್ನು ದೋಚಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮೀನುಗಾರರಿಗೆ ಆಗಿರುವ ನಷ್ಟವನ್ನು ಭರಿಸಬೇಕು, ಮುಂದೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಮಧ್ವರಾಜ್ ಆಗ್ರಹಿಸಿದ್ದಾರೆ.