Connect with us

    LATEST NEWS

    ಪಾಕಿಸ್ತಾನದಲ್ಲಿ ಗಗನಕ್ಕೇರಿದ ಪೆಟ್ರೋಲ್ ಡಿಸೇಲ್ ಬೆಲೆ…!!

    ಇಸ್ಲಾಮಾಬಾದ್ ಫೆಬ್ರವರಿ 16 : ದಿವಾಳಿ ಹಂತದಲ್ಲಿರುವ ಪಾಕಿಸ್ತಾನದಲ್ಲಿ ಇದೀಗ ರಾತ್ರೊರಾತ್ರಿ ಪೆಟ್ರೋಲ್ ಬೆಲೆಗಳನ್ನು ಏರಿಸಲಾಗಿದೆ. ಪಾಕಿಸ್ತಾನದ ಆರ್ಥಿಕ ಸ್ಥಿತಿ ದಿನಕಳೆದಂತೆ ದಿವಾಳಿ ಸ್ಥಿತಿಗೆ ತಲುಪುತ್ತಿದ್ದು, ಅಂತಾರಾಷ್ಟ್ರೀಯ ಹಣಕಾಸು ನಿಧಿ ಷರತ್ತುಗಳಂತೆ ಭಾರೀ ಪ್ರಮಾಣದಲ್ಲಿ ತೈಲಬೆಲೆ ಹೆಚ್ಚಿಸಿದೆ .


    ಬುಧವಾರ ರಾತ್ರೋ ರಾತ್ರಿ ಪೆಟ್ರೋಲ್ ಬೆಲೆ 22.20 ರೂಪಾಯಿ ಹಾಗೂ ಡಿಸೇಲ್ ಬೆಲೆಯನ್ನು 17.20 ರೂಪಾಯಿಗೆ ಏರಿಸಲಾಗಿದೆ. ಇದೀಗ ಪಾಕಿಸ್ತಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಗರಿಷ್ಠ 272 ರೂ.ಗಳಿಗೆ ತಲುಪಿದೆ. ಪ್ರತಿ ಲೀಟರ್ ಡೀಸೆಲ್ ಬೆಲೆ 280 ರೂ.ಗೆ ಹೆಚ್ಚಳವಾಗಿದೆ. ಸೀಮೆ ಎಣ್ಣೆ ಬೆಲೆ 12.90 ರೂ. ಹೆಚ್ಚಿಸಿದ್ದು ಪ್ರತಿ ಲೀಟರ್‌ಗೆ 202.73 ರೂ.ಗಳಿಗೆ ಮಾರಾಟವಾಗುತ್ತಿದೆ. ಜೊತೆಗೆ ಲಘು ಡೀಸೆಲ್ ಬೆಲೆ 9.68 ರೂ. ಹೆಚ್ಚಿಸಿದ್ದು, ಪ್ರತಿ ಲೀಟರ್ 196.68 ರೂ.ಗಳಿಗೆ ಮಾರಾಟವಾಗುತ್ತಿದೆ.

    ಬುಧವಾರ ಮಧ್ಯರಾತ್ರಿ 12 ಗಂಟೆಯಿಂದಲೇ ಈ ನಿಯಮ ಜಾರಿಗೆ ಬಂದಿವೆ. ಸದ್ಯ ಎಎಂಎಫ್ ಕಠಿಣ ನಿಯಮಗಳ ನಡುವೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮತ್ತಷ್ಟು ಹಣದುಬ್ಬರಕ್ಕೆ ಕಾರಣವಾಗಬಹುದು ಎಂದು ಅರ್ಥಶಾಸ್ತ್ರಜ್ಞರು ಆತಂಕಪಟ್ಟಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply