Connect with us

    LATEST NEWS

    ಶೌಚಾಲಯ ವಿಡಿಯೋ ಪ್ರಕರಣ – ಇದು ಒಂದು ರೀತಿಯ ಭಯೋತ್ಪಾದನೆ – ಪ್ರಮೋದ್ ಮಧ್ವರಾಜ್

    ಉಡುಪಿ ಜುಲೈ 28: ಉಡುಪಿಯ ಖಾಸಗಿ‌ ಕಾಲೇಜಿನ‌ ಶೌಚಾಲಯದಲ್ಲಿ ವಿಧ್ಯಾರ್ಥಿನಿಯರ ವಿಡಿಯೋ ರೆಕಾರ್ಡಿಂಗ್ ಪ್ರಕರಣ ಸಮಸ್ತ ಮಾನವ ಕುಲ ತಲೆ ತಗ್ಗಿಸುವ ಕೆಲಸ ಆಗಿದ್ದು, ಹೆಣ್ಣು ಮಕ್ಕಳ ಮಾನ‌ ಮರ್ಯಾದಿ ಸಂಸ್ಕೃತಿ ಖಾಸಗಿತನಕ್ಕೆ ಧಕ್ಕೆಯಾಗುವ ವಿಚಾರ ಉಡುಪಿಯಲ್ಲಿ ನಡೆದಿರುವುದು ನಾವೆಲ್ಲಾ ತಲೆ‌ತಗ್ಗಿಸಬೇಕಾದ ಸಂಗತಿ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.


    ಉಡುಪಿಯಲ್ಲಿ ಮಾತನಾಡಿದ ಅವರು ವಿಧ್ಯಾರ್ಥಿನಿಯರ ಶೌಚಾಲಯದಲ್ಲಿಇರುವಾಗ ವಿಡಿಯೋ ತೆಗೆದು ಅದನ್ನು ಫ್ರಾಂಕ್ ವಿಡಿಯೋ ಅನ್ನೋದಾದರೆ ಫ್ರಾಂಕ್ ಶಬ್ದಕ್ಕೆ ಮಾಡಿದ ಅವಮಾನ, ಈ ಕುಕೃತ್ಯ ಮಾಡಿದವರ ವಿಡಿಯೋ ಮಾಡಿದ್ರೆ ಅದನ್ನು ಪ್ರಾಂಕ್ ಅಂತ ಕರೀತಾರಾ ಎಂದು ಪ್ರಶ್ನಿಸಿದ ಅವರು , ಆರಂಭದಲ್ಲಿ ಸರಕಾರ ಮತ್ತು ಪೋಲೀಸ್ ಇಲಾಖೆ ಪ್ರಕರಣಕ್ಕೆ ಸಂಬಂಧಿಸಿದಂತೆ‌ ತೋರಿದ‌ ತಿರಸ್ಕಾರ ಭಾವ ಖಂಡನೀಯ ಎಂದರು.

    ಗೃಹ ಸಚಿವ ಡಾ ಪರಮೇಶ್ವರ್ ಸಾಕಷ್ಟು ಶಿಕ್ಷಣ ಸಂಸ್ಥೆಗಳನ್ನು ನಡೆಸಿದ ಅನುಭವಿ. ಅವರು ಮತ್ತು ಪೋಲೀಸ್ ಇಲಾಖೆ ಈ ವಿಚಾರವನ್ನು ಅತ್ಯಂತ ಸಣ್ಣ ವಿಚಾರ ಎಂದು ಪರಿಗಣಿಸಿರುವುದು ಖಂಡನೀಯ, ಆರಂಭದಿಂದಲೇ‌ ಈ ಪ್ರಕರಣವನ್ನು ಮುಚ್ಚಿ ಹಾಕುವ ಮತ್ತು ತೇಪೆ‌ ಹಚ್ಚುವ ಕೆಲಸವನ್ನು ಸರಕಾರ ಮತ್ತು ಪೊಲೀಸ್ ಇಲಾಖೆ ಮಾಡುತ್ತಿದೆ. ಈ ಪ್ರಕರಣದ‌ ತನಿಖೆ‌ ಯಾವ ರೀತಿ ಸಾಗುತ್ತೆ ಅನ್ನೋದೇ ಅನುಮಾನ, ಇದು ಒಂದು ರೀತಿಯ ಭಯೋತ್ಪಾದನೆ. ಮುಂದಿನ‌ ದಿನಗಳಲ್ಲಿ ಹೆಣ್ಣುಮಕ್ಕಳು ಟಾಯ್ಲೆಟ್ ಗೆ ಹೋಗೋದಕ್ಕೆ ಭಯಪಡ್ತಾರೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply