LATEST NEWS
ಚರ್ಚೆ ಹುಟ್ಟುಹಾಕಿದ ಡಿಸಿಎಂ ಡಿಕೆ ಶಿವಕುಮಾರ್ ಕೇರಳ ಭೇಟಿ….!!

ಮಂಗಳೂರು ಜುಲೈ 29: ಡಿಸಿಎಂ ಡಿ.ಕೆ.ಶಿವಕುಮಾರ್ ದೇವರ ನಾಡು ಕೇರಳಕ್ಕೆ ಭೇಟಿ ನೀಡಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಯಾವುದೇ ಬೆಂಗಾವಲು ವಾಹನವಿಲ್ಲದೆ ಖಾಸಗಿ ಕಾರುಗಳನ್ನು ಬಳಸಿ ತಮ್ಮ ಕುಟುಂಬ ಸದಸ್ಯರೊಂದಿಗೆ ಕಾಸರಗೋಡು ಜಿಲ್ಲೆಯ ಬೇಕಲ ಪೋರ್ಟ್ ನ ತಾಜ್ ಹೋಟೇಲ್ ನಲ್ಲಿ ಡಿಕೆಶಿ ತಂಗಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಹಲವು ಗೊಂದಲಗಳು, ಶಾಸಕರಿಂದ ಮುಖ್ಯಮಂತ್ರಿಗೆ ಪತ್ರ, ಗ್ಯಾರೆಂಟಿ ಯೋಜನೆಗಳಿಂದ ಸರಕಾರದಲ್ಲಿ ಹಣವಿಲ್ಲ ಎನ್ನುವ ಸ್ವತಃ ಡಿಕೆಶಿ ಹೇಳಿಕೆಗಳು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಯಲ್ಲಿರುವ ಸಂದರ್ಭದಲ್ಲೇ ಡಿಕೆಶಿ ಕೇರಳ ಭೇಟಿ ಹಲವು ಸಂಶಯಗಳಿಗೆ ಎಡೆ ಮಾಡಿದೆ. ತಂತ್ರ ಮತ್ತು ತಂತ್ರಗಳಿಗೆ ಹೆಸರುವಾಸಿಯಾಗಿರುವ ಕೇರಳಕ್ಕೆ ರಾಜ್ಯದ ಪ್ರಮುಖ ಮುಖಂಡರು ಭೇಟಿ ನೀಡಿ ವಿಶೇಷ ಪೂಜೆ ಮಾಡಿಸುತ್ತಿರುವುದು ಸಾಮಾನ್ಯವಾಗಿದ್ದು, ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ ಜೊತೆಗೆ ಡಿ.ಕೆ.ಶಿವಕುಮಾರ್ ಕೂಡಾ ಈ ಹಿಂದೆ ಕೇರಳದಲ್ಲಿ ಜ್ಯೋತಿಷ್ಯ ಹಾಗು ಹೋಮಗಳನ್ನು ನಡೆಸಿರುವುದು ಈಗಾಗಲೇ ವರದಿಯಾಗಿವೆ. ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ ವಿದೇಶ ಪ್ರಯಾಣ ಬೆಳೆಸಿದ ಸಂದರ್ಭದಲ್ಲಿ ಡಿಕೆಶಿ ಕೇರಳ ಪ್ರವಾಸದ ಹಿಂದೆ ಯಾವುದಾದರೂ ರಾಜಕೀಯ ಉದ್ಧೇಶವಿದೆಯೇ ಅಥವಾ ಇದೊಂದು ಖಾಸಗಿ ಭೇಟಿಯೋ ಅನ್ನುವ ಅನುಮಾನ ಇದೀಗ ಕಾಡತೊಡಗಿದೆ.
