KARNATAKA
420 ನಂಬರ್‌ನವರು ಲೋಕಸಭೆ ಚುನಾವಣೆಯಲ್ಲಿ 400 ಸೀಟುಗಳನ್ನು ಪಡೆಯುವುದಾಗಿ ಮಾತನಾಡುತ್ತಿದ್ದಾರೆ, ಏನ್ ಮಾಡೊದು – ಪ್ರಕಾಶ್ ರೈ
ಚಿಕ್ಕಮಗಳೂರು ಮಾರ್ಚ್ 17 : 420 ನಂಬರ್‌ನವರು ಲೋಕಸಭೆ ಚುನಾವಣೆಯಲ್ಲಿ 400 ಸೀಟುಗಳನ್ನು ಪಡೆಯುವುದಾಗಿ ಮಾತನಾಡುತ್ತಿದ್ದಾರೆ, ಏನ್ ಮಾಡೊದು’ ಎಂದು ನಟ ಪ್ರಕಾಶ್ ರಾಜ್ ಲೇವಡಿ ಮಾಡಿದ್ದಾರೆ.
ಚಿಕ್ಕಮಗಳೂರು ಪ್ರೆಸ್‌ಕ್ಲಬ್ ಮಾತನಾಡಿದ ಅವರು ಹಿಂದೆ ಇಂದಿರಾಗಾಂಧಿ ಕಾಲದಲ್ಲಿ ಘೋಷಿತ ಸರ್ವಾಧಿಕಾರಿ ಆಡಳಿತ ಇತ್ತು. ಈಗ ಅಘೋಷಿತ ಸರ್ವಾಧಿಕಾರಿ ಆಡಳಿತ ಇದೆ. ಆಗ ಮಾಧ್ಯಮಗಳು ಸರ್ವಾಧಿಕಾರದ ವಿರುದ್ಧ ಇದ್ದವು, ಈಗ ಮಾರಿಕೊಂಡು ಸರ್ವಾಧಿಕಾರದ ಪರ ಇವೆ. ಈ ಚುನಾವಣೆಯಲ್ಲಿ ಸರ್ವಾಧಿಕಾರ ಬದಲಾಗುವ ನಂಬಿಕೆ ಇದೆ. ಒಂದೇ ಪಕ್ಷಕ್ಕೆ ಅಷ್ಟು ದೊಡ್ಡ ಬಹುಮತ ಸಿಗುವ ಸಾಧ್ಯತೆ ಇಲ್ಲ. ಆದ್ದರಿಂದಲೇ ಪ್ರಾದೇಶಿಕ ಪಕ್ಷಗಳನ್ನು ಒಡೆಯುವ ಕೆಲಸ ಮಾಡಲಾಗಿದೆ.
ನಾಳೆಯೇ ಬದಲಾಗಬೇಕು ಎಂಬುದು ನನ್ನ ಆಶಯವಲ್ಲ, ನಿಧಾನವಾಗಿಯಾದರೂ ಜನರಿಗೆ ಅರ್ಥವಾಗುತ್ತದೆ. ಈಗಿರುವ ಎರಡು ಪಕ್ಷಗಳಲ್ಲಿ ಅಷ್ಟೇನು ಭಿನ್ನತೆ ಇಲ್ಲ. ಆ ಪಕ್ಷದವರು ಈ ಪಕ್ಷಕ್ಕೆ ಹೋಗುತ್ತಾರೆ, ಬಟ್ಟೆಯ ಬಣ್ಣ ಬದಲಿಸುತ್ತಾರೆ ಅಷ್ಟೆ. ಹಣಬಲವೇ ಚುನಾವಣೆಯಲ್ಲಿ ಗೆಲ್ಲುತ್ತಿದೆ ಎಂದರೆ ಪ್ರಜಾಪ್ರಭುತ್ವ ಸೋಲುತ್ತಿದೆ. ಸಾಮಾನ್ಯ ಜನರು ಪ್ರತಿ ಚುನಾವಣೆಯಲ್ಲಿ ಸೋಲುತ್ತಿದ್ದೇವೆ ಎಂದೇ ಅರ್ಥ ಎಂದರು.