BANTWAL
ಲೋಕಸಭಾ ಚುನಾವಣೆ : ಕೇರಳ-ಕರ್ನಾಟಕ ಗಡಿಭಾಗದ ಚೆಕ್ ಪೋಸ್ಟ್ ಪರಿಶೀಲಿಸಿದ ದ.ಕ. ಎಸ್ ಪಿ
ಮಂಗಳೂರು : ಲೋಕಸಭಾ ಚುನಾವಣೆ ಘೊಷಣೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ ಬಿ ರಿಷ್ಯಂತ್ ಅಂತರ್ ರಾಜ್ಯ ಗಡಿಗಳನ್ನು ಹೊಂದಿರುವ ಜಿಲ್ಲಾ ಗಡಿ ಪ್ರದೇಶ ಮತ್ತು ಚೆಕ್ ಪೋ ಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಮುಖವಾಗಿ ಕೇರಳ-ಕರ್ನಾಟಕ ಗಡಿಭಾಗದಲ್ಲಿರುವ ವಿಟ್ಲ ಸಾರಡ್ಕ ಚೆಕ್ ಪೋಸ್ಟ್ ಭೇಟಿ ನೀಡಿ ಭದ್ರತಾ ಕ್ರಮಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು. ಜಿಲ್ಲೆ ಪ್ರವೇಶಿಸುವ ಎಲ್ಲಾ ವಾಹನಗಳನ್ನು ಯಾವುದೇ ಲೋಪಗಳಾಗದಂತೆ ಕಟ್ಟುನಿಟ್ಟಾಗಿ ತಪಾಸಣೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದರು.
ಬಳಿಕ ಚುನಾವಣಾ ಕರ್ತವ್ಯಕ್ಕಾಗಿ ಆಗಮಿಸುವ ಕೇಂದ್ರೀಯ ಭದ್ರತಾ ತುಕಡಿಗಳು ತಂಗುವ ಸ್ಥಳಗಳಲ್ಲಿ ಮೂಲಭೂತ ವ್ಯವಸ್ಥೆಗಳ ಲಭ್ಯತೆಯ ಬಗ್ಗೆಯೂ ಪರಿಶೀಲನೆ ನಡೆಸಿದರು.
You must be logged in to post a comment Login