Connect with us

    LATEST NEWS

    ಪ್ರಧಾನಿ ನರೇಂದ್ರ ಮೋದಿ ಒಬ್ಬ ದೊಡ್ಡ ನಟ – ಪ್ರಕಾಶ್ ರೈ

    ಪ್ರಧಾನಿ ನರೇಂದ್ರ ಮೋದಿ ಒಬ್ಬ ದೊಡ್ಡ ನಟ – ಪ್ರಕಾಶ್ ರೈ

    ಬೆಂಗಳೂರು- ಖ್ಯಾತ ಬಹುಬಾಷಾ ನಟ ಪ್ರಕಾಶ್ ರೈ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ದ ಹೇಳಿಕೆಯನ್ನು ನೀಡಿದ್ದು ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನಲ್ಲಿ ನಡೆದ ಡಿವೈಎಫ್ಐ ಹಮ್ಮಿಕೊಂಡಿದ್ದ 11ನೇ ರಾಜ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದ ಸಂದರ್ಭದಲ್ಲಿ ಅವರು ಪ್ರಧಾನಿ ಮೋದಿ ಅವರ ವಿರುದ್ದ ಕಿಡಿಕಾರಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಬಹುಭಾಷಾ ನಟ ಪ್ರಕಾಶ್ ರೈ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ದ ಹರಿಹಾಯ್ದರು. ಗೌರಿ ಲಂಕೇಶ್ ಹತ್ಯೆಯನ್ನು ಸೋಶಿಯಲ್ ಮಿಡಿಯಾದಲ್ಲಿ ಸಂಭ್ರಮಿಸುವವರು ಯಾರೆಂದು ನಮಗೆ ತಿಳಿದಿದ್ದು, ಇಂತಹವರಲ್ಲಿ ಕೆಲವರನ್ನು ಖುದ್ದು ಪ್ರಧಾನಿ ಮೋದಿಯವರೆ ಸೋಶಿಯಲ್ ಮೀಡಿಯಾದಲ್ಲಿ ಪಾಲೋ ಮಾಡುತ್ತಿದ್ದು ಇದು ಚಿಂತಿಸುವಂತಾಗಿದೆ ಎಂದು ಅವರು ಹೇಳಿದರು.

    ಇಂತಹವರ ಬಗ್ಗೆ ಮೋದಿಯವರ ಮೌನ ನೋಡಿದರೆ ಮೋದಿ ಅವರು ನನಗಿಂತ ದೊಡ್ಡ ನಟರಾಗಿದ್ದು ನನಗೆ ಸಿಕ್ಕಿರುವ ಪ್ರಶಸ್ತಿಗಳನ್ನು ಅವರಿಗೆ ನೀಡಬೇಕೆಂದು ಹೇಳಿದರು. ನಾನು ಒಬ್ಬ ನಟನಾಗಿದ್ದು ನನಗೆ ನಿಮ್ಮ ನಟನೆಯನ್ನು ನಾನು ಸರಿಯಾಗಿ ಗ್ರಹಿಸಬಲ್ಲೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

    ಈ ನಡುವೆ ಪ್ರಕಾಶ್ ರೈ ಅವರ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು , ಪ್ರಕಾಶ್ ರೈ ವಿರುದ್ದ ನೆಟ್ಟಿಗರು ಗರಂ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

     

    VIDEO

    Share Information
    Advertisement
    Click to comment

    You must be logged in to post a comment Login

    Leave a Reply