Connect with us

LATEST NEWS

ಮಂಗಳೂರಿನಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಷಾ

ಮಂಗಳೂರಿನಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಷಾ

ಮಂಗಳೂರು ಅಕ್ಟೋಬರ್ 3: ಚಾಣಾಕ್ಯ ಎಂದೇ ಕರೆಯಲಾಗುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಡರಾತ್ರಿ ಮಂಗಳೂರಿಗೆ ಆಗಮಿಸಿದರು.

ಅಹಮದಾಬಾದ್ ನಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿನ ಅಂತರಾಷ್ಟ್ರೀಯ ವಿಮಾನನಿಲ್ದಾಣ ಕ್ಕೆ ರಾತ್ರಿ ಸುಮಾರು 1:30 ಗಂಟೆಗೆ ಬಂದಳಿದ ಷಾ ಅವರಿಗೆ ಭರ್ಜರಿ ಸ್ವಾಗತ ಕೋರಲಾಯಿತು .

ಅಮಿತ್ ಷಾ ಅವರನ್ನು ಸಂಸದ ನಳಿನ್ ಕುಮಾರ್ ಕಟೀಲ್, ಕೇರಳ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೆ ಸುರೇಂದ್ರನ್, ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಮ್ ರಾಜಶೇಖರ್ ಸೇರಿದಂತೆ ಪ್ರಮುಖ ನಾಯಕರು ಸ್ವಾಗತಿಸಿದರು.

ತಡರಾತ್ರಿಯ ವರೆಗೂ ಕಾದುಕುಳಿತಿದ್ದ ಬಿಜೆಪಿ ಕಾರ್ಯಕರ್ತರಿಗೆ ಷಾ ಆಗಮನ ರಣೋತ್ಸಾಹ ತಂಬಿತ್ತು. ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಕಾರ್ಯಕರ್ತರಿಗೆ ಕೈ ಬೀಸಿದ ಷಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು .

ಬೃಹತ್ ಜನರಕ್ಷಾ ಪಾದಯಾತ್ರೆ

ರಾತ್ರಿಯೇ ಅಮಿತ್ ಷಾ ಕೇರಳಕ್ಕೆ ತೆರಳಿದರು.ಕೇರಳದ ಗಡಿಭಾಗ ತಲಪಾಡಿ ತನಕ ಬಿಜೆಪಿಯ ನಾಯಕರು ,ಕಾರ್ಯಕರ್ತರು ವಾಹನ ಮೆರವಣಿಗೆ ನಡೆಸಿ ದೇವರ ಸ್ವಂತ ನಾಡಿಗೆ ಬೀಳ್ಕೊಟ್ಟರು.

ಕೇರಳದಾದ್ಯಂತ ನಿರಂತರವಾಗಿ ನಡೆಯುತ್ತಿರುವ ಆರ್ ಎಸ್ ಎಸ್ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆ ಖಂಡಿಸಿ ಇಂದು ಬೆಳಗ್ಗೆ 10 ಗಂಟೆಗೆ ಕೇರಳದ ಪಯ್ಯನೂರಿನಲ್ಲಿ ನಡೆಯುವ ಬೃಹತ್ ಜನರಕ್ಷಾ ಪಾದಯಾತ್ರೆ ಅಮಿತ್ ಷಾ ಚಾಲನೆ ನೀಡಲಿದ್ದಾರೆ.

ಪಾದಯಾತ್ರೆಯಲ್ಲಿ ಭಾಗವಹಿಸುವ ಅಮಿತ್ ಷಾ ನಂತರ ರಾತ್ರಿ ಮಂಗಳೂರಿನಲ್ಲಿ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ.ನಾಳೆ ಇಡೀ ದಿನ ಅಮಿತ್ ಷಾ ಮಂಗಳೂರಿನಲ್ಲಿ ಪಕ್ಷದ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸಲಿದ್ದಾರೆ.

Video


BJP Suprem Amith Sha Visit to Mangalore by mangaloremirror