Connect with us

    FILM

    ಪ್ರಕಾಶ್ ರೈ ಅರ್ಬನ್ ನಕ್ಸಲ್ ಎಂದ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

    ಮುಂಬೈ ಪೆಬ್ರವರಿ 09: ದಿ ಕಾಶ್ಮೀರಿ ಫೈಲ್ಸ್ ಸಿನೆಮಾ ವಿರುದ್ದ ಮಾತನಾಡಿದ್ದ ನಟ ಪ್ರಕಾಶ್ ರೈ ಅವರನ್ನು ಅರ್ಬನ್ ನಕ್ಸಲ್ ಎಂದು ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಎಂದು ಕರೆದಿದ್ದಾರೆ.


    ಪ್ರಕಾಶ್ ರೈ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ಮಾತನಾಡಿದ ಭಾಸ್ಕರ್ ಪ್ರಶಸ್ತಿಯನ್ನೂ ಪಡೆಯದವರು ಆಸ್ಕರ್ ಪ್ರಶಸ್ತಿ ಕೇಳುತ್ತಿದ್ದಾರೆ ಎಂದು ಪರೋಕ್ಷವಾಗಿ ವಿವೇಕ್ ಅಗ್ನಿಹೋತ್ರಿಯನ್ನು ಕಾಲೆಳೆದಿದ್ದರು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಅಂತಾರಾಷ್ಟ್ರೀಯ ಜ್ಯೂರಿಗಳು ತೆಗಳಿದ್ದರು ಎಂದು ನೆನಪಿಸಿದ್ದರು. ಹೀಗಾಗಿ ಅಗ್ನಿಹೋತ್ರಿ ಮತ್ತೆ ಪ್ರಕಾಶ್ ರೈಗೆ ತಿರುಗೇಟು ನೀಡಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಪ್ರಕಾಶ್ ರೈ ಅವರ ಬಗ್ಗೆ ಬರೆದಿರುವ ವಿವೇಕ್ ಅಗ್ನಿಹೋತ್ರಿ, ‘ಅರ್ಬನ್ ನಕ್ಸಲ್ ಗಳ ನಿದ್ದೆ ಕೆಡಿಸಿದೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ. ಚಿತ್ರವು ಬಿಡುಗಡೆಯಾಗಿ ಒಂದು ವರ್ಷ ಕಳೆದರೂ, ಓರ್ವ ವ್ಯಕ್ತಿಯ ನಿದ್ದೆ ಕೆಡಿಸಿದೆ ಆ ಸಿನಿಮಾ. ಭಾಸ್ಕರ್ ಪ್ರಶಸ್ತಿಯು ನಿಮ್ಮ ಬಳಿಯೇ ಇರುವಾಗ ಅದನ್ನು ನಾನು ಪಡೆಯಲು ಸಾಧ್ಯವಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply