Connect with us

    LATEST NEWS

    ಬಾಂಗ್ಲಾದೇಶದ ನಿಲಿ ಚಿತ್ರತಾರೆ ಮುಂಬೈನಲ್ಲಿ ಅರೆಸ್ಟ್ …ಕಾರಣ ಏನು…?

    ಮುಂಬೈ ಸೆಪ್ಟೆಂಬರ್ 27: ಬಾಂಗ್ಲಾದೇಶದ ಪೋರ್ನ್ ಸ್ಟಾರ್ ರಿಯಾ ಬರ್ಡೆಯನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಕಲಿ ದಾಖಲೆಗಳನ್ನು ಬಳಸಿ ಭಾರತೀಯ ಪಾಸ್‌ಪೋರ್ಟ್ ಪಡೆದ ಆರೋಪದ ಮೇಲೆ ಮಹಾರಾಷ್ಟ್ರದ ಉಲ್ಲಾಸ್‌ನಗರದಲ್ಲಿ ಹಿಲ್‌ಲೈನ್ ಪೊಲೀಸರು ಬಂಧಿಸಿದ್ದಾರೆ .ಬಾಂಗ್ಲಾದೇಶಿ ಪ್ರಜೆಯು ತನ್ನ ತಾಯಿ ಮತ್ತು ಒಡಹುಟ್ಟಿದವರ ಜೊತೆಗೆ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂದು ಆರೋಪಿಸಲಾಗಿದೆ.


    ರಿಯಾ ಬಾರ್ಡೆ ಅವರ ತಾಯಿ, ಬಾಂಗ್ಲಾದೇಶಿ ಪ್ರಜೆಯಾದ ರೂಬಿ ಶೇಖ್, ಅಮರಾವತಿಯ ವ್ಯಕ್ತಿ ಅರವಿಂದ್ ಬಾರ್ಡೆ ಅವರನ್ನು ವಿವಾಹವಾಗಿದ್ದರು ಮತ್ತು ತಾವು ಪಶ್ಚಿಮ ಬಂಗಾಳದ ನಿವಾಸಿ ಎಂದು ಗುರುತಿಸಿಕೊಂಡಿದ್ದರು.  ರೂಬಿ ನಂತರ ತನ್ನ ಹೆಸರನ್ನು ಅಂಜಲಿ ಎಂದು ಬದಲಾಯಿಸಿಕೊಂಡರು ಮತ್ತು ಕುಟುಂಬವು ಭಾರತದಲ್ಲಿ ಅಕ್ರಮವಾಗಿ ವಾಸಿಸಲು ಪ್ರಾರಂಭಿಸಿತು.


    ಆರೋಪಿ ರಿಯಾ ಬರ್ಡೆ ಅವರ ಪೋಷಕರು ಪ್ರಸ್ತುತ ಕತಾರ್‌ನಲ್ಲಿ ನೆಲೆಸಿದ್ದಾರೆ. ಆಕೆಯ ಸಹೋದರಿ ರಿತು, ಅಲಿಯಾಸ್ ಮೋನಿ ಶೇಖ್ ಮತ್ತು ಆಕೆಯ ಸಹೋದರ ರಿಯಾಜ್ ಶೇಖ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.ಮುಂಬೈ ಪೊಲೀಸರು ವೇಶ್ಯಾವಾಟಿಕೆಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ರಿಯಾಳನ್ನು ಬಂಧಿಸಿದ್ದರು ಎಂದು ಹೇಳಲಾಗಿದೆ. ರಿಯಾಳ ಸ್ನೇಹಿತ ಪ್ರಶಾಂತ್ ಮಿಶ್ರಾ ಎಂಬಾತ ಪೊಲೀಸರಿಗೆ ಮಾಹಿತಿ ನೀಡಿದ್ದ. ಇದರ ಆದಾರದ ಮೇಲೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಅವರ ವಿರುದ್ಧ ಐಪಿಸಿ ಸೆಕ್ಷನ್ 420, 465, 468, 479, 34 ಮತ್ತು 14 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂಬೈ ಮೂಲದ ಅಶ್ಲೀಲ ದಂಧೆಗಳೊಂದಿಗೆ ಆಕೆಯ ಸಂಪರ್ಕದ ಕುರಿತು ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

    Share Information
    Advertisement
    Click to comment

    You must be logged in to post a comment Login

    Leave a Reply