FILM
ಸೆಲ್ಪಿ ನೆಪದಲ್ಲಿ ಪೂನಂ ಪಾಂಡೆಗೆ ಕಿಸ್ ಕೊಡಲು ಬಂದ ಅಭಿಮಾನಿ – ಇದು ಡ್ರಾಮಾ ಎಂದ ನೆಟ್ಟಿಗರು

ಮುಂಬೈ ಫೆಬ್ರವರಿ 22: ಸದಾ ವಿವಾದಗಳಿಂದ ಸುದ್ದಿಯಲ್ಲಿರುವ ನಟಿ ಪೂನಂ ಪಾಂಡೆ ಮತ್ತೆ ಇದೀಗ ಸುದ್ದಿಯಲ್ಲಿದ್ದಾರೆ. ಅಭಿಮಾನಿಯೊಬ್ಬ ಸೆಲ್ಪಿ ಕೇಳುವ ನೆಪದಲ್ಲಿ ನಟಿ ಕಿಸ್ ಮಾಡಲು ಹೋಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂಬೈನ ಬೀದಿಯಲ್ಲಿ ಪೂನಂ ಪಾಂಡೆಗೆ ಅಭಿಮಾನಿಯೊಬ್ಬ ಬಲವಂತವಾಗಿ ಕಿಸ್ ಮಾಡಲು ಬಂದಿದ್ದಾನೆ. ಆಗ ಪೂನಂ ಪಾಂಡೆ ಅವರು ಹೆದರಿಕೊಂಡು ಪಕ್ಕಕ್ಕೆ ಸರಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಪರಾಜಿಗಳು ಪೂನಂ ಪಾಂಡೆಯ ಫೋಟೋ ತೆಗೆಯುತ್ತಿದ್ದಾಗ ಅಭಿಮಾನಿಯೊಬ್ಬ ಸೆಲ್ಫಿ ಕೇಳಲು ಬಂದ. ಒಂದು ಅಡಿ ಅಂತರದಿಂದ ಸೆಲ್ಫಿ ನೀಡಲು ಪೂನಂ ಪಾಂಡೆ ಕೂಡ ಒಪ್ಪಿದರು. ಆದರೆ ಅಷ್ಟಕ್ಕೇ ಆ ವ್ಯಕ್ತಿ ಸುಮ್ಮನಾಗಲಿಲ್ಲ. ಇನ್ನೂ ಹತ್ತಿರ ಹತ್ತಿರ ಬರುತ್ತಾ ಪೂನಂ ಪಾಂಡೆಯ ಮುಖಕ್ಕೆ ಕಿಸ್ ಮಾಡಲು ಪ್ರಯತ್ನಿಸಿದ. ಆಗ ಪೂನಂ ಪಾಂಡೆ ಗಾಬರಿಯಾಗಿ ಓಡಿ ಹೋದರು.

ವೈರಲ್ ಆಗಿರುವ ಈ ವಿಡಿಯೋ ನೋಡಿದ ಅನೇಕರಿಗೆ ಅನುಮಾನ ಮೂಡಿದೆ. ಇದು ಬೇಕಂತಲೇ ಮಾಡಿರುವ ಡ್ರಾಮಾ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಮೊದಲೇ ಪ್ಲ್ಯಾನ್ ಮಾಡಿಕೊಂಡು ಈ ರೀತಿ ನಾಟಕ ಮಾಡಲಾಗಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
4 Comments