Connect with us

LATEST NEWS

ರಕ್ಷಣಾ ಸಚಿವ ಅರುಣ್ ಜೇಟ್ಲಿ ಕೇರಳ ತಿರುವನಂತಪುರ ಭೇಟಿ, ಮೃತ RSS ಕಾರ್ಯಕರ್ತ ರಾಜೇಶ್ ಮನೆ ಭೇಟಿ.

ತಿರುವನಂತಪುರ : ಅಗಸ್ಟ್ 06 : ರಕ್ಷಣಾ ಸಚಿವ ಅರುಣ್ ಜೇಟ್ಲಿ ಕೇರಳ ತಿರುವನಂತಪುರಕ್ಕೆ ಭೇಟಿ ನೀಡಿದ್ದಾರೆ. ಅರುಣ್ ಜೇಟ್ಲಿ ಅವರು ಇತ್ತೀಚೆಗೆ ಸಿಪಿಎಂ ಕಾರ್ಯಕರ್ತರಿಂದ ಹತ್ಯೆಯಾದ ಆರ್ ಎಸ್ ಎಸ್ ಕಾರ್ಯಕರ್ತ ರಾಜೇಶ್ ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು.

ಇಂದು ಬೆಳಿಗ್ಗೆ 11.15ರ ಸುಮಾರಿಗೆ ಕೇರಳ ತಿರುವನಂತಪುರ   ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಜೇಟ್ಲಿಯವರನ್ನು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿದರು.

ನಂತರ ಇತ್ತೀಗಷ್ಟೇ ಸಿಪಿಎಂ ಕಾರ್ಯಕರ್ತರಿಂದ ಹತ್ಯೆಗೀಡಾದ ಆರ್’ಎಸ್ಎಸ್ ಕಾರ್ಯಕರ್ತ ರಾಜೇಶ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ರಾಜೇಶ್ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಶತ್ರುಗಳೂ ಕೂಡ ಇಷ್ಟೊಂದು ಕ್ರೂರವಾಗಿರುವುದಿಲ್ಲ; ಜೇಟ್ಲಿ

ಆರ್’ಎಸ್ಎಸ್ ಕಾರ್ಯಕರ್ತ ರಾಜೇಶ್ ಕುಟುಂಬಸ್ಥರನ್ನು ಭೇಟಿಯಾದ ಬಳಿಕ ಮಾತನಾಡಿರುವ ಜೇಟ್ಲಿಯವರು, ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ ಶತ್ರುಗಳೂ ಕೂಡ ಇಷ್ಟೊಂದು ಕ್ರೂರವಾಗಿರುವುದಿಲ್ಲ ಎಂದು ಹೇಳಿದ್ದಾರೆ.

 

 

 

ಹತ್ಯೆಯಾದ ಕಾರ್ಯಕರ್ತನ ಕುಟುಂಬಸ್ಥರನ್ನು ಭೇಟಿ ಮಾಡಿದೆ. ಕಾರ್ಯಕರ್ತರಿಗೆ ರಾಜೇಶ್ ಒಬ್ಬ ಮಾದರಿಯಾಗಿದ್ದ. ಈ ರೀತಿಯ ಹಿಂಸಾಚಾರಗಳು ಪಕ್ಷದ ಸಿದ್ದಾಂತಗಳನ್ನು ಕುಗ್ಗಿಸುವುದಿಲ್ಲ. ಕಾರ್ಯಕರ್ತರು ಇದರಿಂದ ಹೆದರುವುದೂ ಇಲ್ಲ. ಇಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಿರವವರ ವಿರುದ್ಧ ಹೋರಾಡಲು ಕಾರ್ಯಕರ್ತರಲ್ಲಿರುವ ಸ್ಥೈರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.

ರಾಜೇಶ್ ಬಡ ಕುಟುಂಬಕ್ಕೆ ಸೇರಿದವನಾಗಿದ್ದ. ರಾಜೇಶ್ ನನ್ನು ಕಳೆದುಕೊಂಡ ಬಳಿಕ ಅವರ ಕುಟುಂಬದ ಜೀವನೋಪಾಯಕ್ಕೆ ಯಾವುದೇ ಆಧಾರಗಳೂ ಇಲ್ಲ. ಶತ್ರುಗಳೂ ಕೂಡ ಇಂತಹ ಕೃತ್ಯಗಳನ್ನು ಎಸಗುವುದಿಲ್ಲ. ನಿಷ್ಕರುಣಿಯಾಗಿ ಭೀಕರವಾಗಿ ರಾಜೇಶ್ ಅವರನ್ನು ಹತ್ಯೆ ಮಾಡಲಾಗಿದೆ. ದೇಹದ ಮೇಲೆ 70-80 ಇರಿತದ ಗಾಯಗಳಾಗಿವೆ. ಕೆಲ ತಿಂಗಳುಗಳಿಂದ ಪಕ್ಷದ ಅಧಿಕಾರಿಗಳ ಮೇಲೂ ದಾಳಿಗಳನ್ನು ನಡೆಸಲಾಗುತ್ತಿದೆ. ನಮ್ಮ ಕಾರ್ಯಕರ್ತರ ಮೇಲೆ ದಾಳಿ ನಡೆಸಲಾಗುತ್ತಿದೆ. ಅವರ ಮನೆಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಇದು ಖಂಡನೀಯ ಎಂದು ಹೇಳಿದ್ದಾರೆ.

Facebook Comments

comments