Connect with us

DAKSHINA KANNADA

ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಆಟೋ ರಿಕ್ಷಾಗಳಿಗೆ ಡಿಕ್ಕಿ – ರಿಕ್ಷಾ ಚಾಲಕನ ಸಾವು

ಮಂಗಳೂರು ಅಗಸ್ಟ್ 07: ಕುಡಿದ ಮತ್ತಿನಲ್ಲಿ ಅತಿ ವೇಗವಾಗಿ ಕಾರು ಚಲಾಯಿಸಿ ಆಟೋ ರಿಕ್ಷಾಗಳಿಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟು ಮೂರು ಮಂದಿ ಗಾಯಗೊಂಡ ಘಟನೆ ಮಂಗಳೂರಿನಲ್ಲಿ ತಡರಾತ್ರಿ ನಡೆದಿದೆ .

ನಗರದ ಜ್ಯೋತಿ ವೃತ್ತದಲ್ಲಿ ಈ ಘಟನೆ ನಡೆದಿದ್ದು ಪರೀಕ್ಷಾ ಪಾರ್ಕ್ ನಲ್ಲಿ ನಿಲ್ಲಿಸಿದ್ದ ಆಟೋಗಳಿಗೆ ಅತಿ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದಿದೆ .ಈ ಸಂದರ್ಭದಲ್ಲಿ ಮೂರು ಮಂದಿ ಆಟೋ ಚಾಲಕರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಪಕ್ಕದಲ್ಲೇ ಇರುವ ಕೆಎಂಸಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಟೋ ಚಾಲಕ ಪ್ರವೀಣ್ ಮೃತಪಟ್ಟಿದ್ದಾರೆ .ಆಟೋ ಚಾಲಕರಾದ ಅಶೋಕ್ ಹಾಗೂ ಜಗದೀಶ್ ಎಂಬುವರು ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ .

ಕುಡಿದು ಅತಿ ವೇಗವಾಗಿ ಕಾರು ಚಲಾಯಿಸಿ ರಿಕ್ಷಾ ಡ್ರೈವರ್ ಸಾವಿಗೆ ಕಾರಣರಾದ ಕಾರು ಚಾಲಕನನ್ನು ಅನೀಶ್ ಜಾನ್ ಎಂದು ಗುರುತಿಸಲಾಗಿದೆ .ಕದ್ರಿ ಸಂಚಾರಿ ಠಾಣೆಯ ಪೊಲೀಸರು ಅನೀಶ್ ಜಾನ್ ಅವರನ್ನು ಬಂಧಿಸಿದ್ದಾರೆ .ಈ ಸಂದರ್ಭದಲ್ಲಿ ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ.

Share Information
Advertisement
Click to comment

You must be logged in to post a comment Login

Leave a Reply