Connect with us

LATEST NEWS

ಜೈಪುರದ ಕ್ಯಾಸಿನೊ ಮೇಲೆ ಪೊಲೀಸ್​ ದಾಳಿ: ಕರ್ನಾಟಕದ ಅಧಿಕಾರಿಗಳು ಸೇರಿ 84 ಮಂದಿಯ ಬಂಧನ​

ರಾಜಸ್ಥಾನ, ಆಗಸ್ಟ್ 22: ಜೈಪುರದಲ್ಲಿ ನಡೆಯುತ್ತಿದ್ದ ಕ್ಯಾಸಿನೊ ಡ್ಯಾನ್ಸ್ ಪಾರ್ಟಿ ಮೇಲೆ ಪೊಲೀಸ್​ ದಾಳಿ ನಡೆಸಿದೆ. ಈ ವೇಳೆ 3 ಹುಡುಗಿಯರು ಸೇರಿದಂತೆ 84 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಕರ್ನಾಟಕದ ಮೂವರು ಅಧಿಕಾರಿಗಳು ಸಹ ಸೇರಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ವಾರಾಂತ್ಯದಲ್ಲಿ ಎರಡು ದಿನಗಳ ಕಾಲ ಈ ಫಾರ್ಮ್‌ಹೌಸ್ ಬುಕ್ ಮಾಡಿರುವುದು ಬೆಳಕಿಗೆ ಬಂದಿದೆ. ಅದರ ಮೇಲೆ ಪೊಲೀಸರು ರಾತ್ರಿ 2 ಗಂಟೆಗೆ ದಾಳಿ ನಡೆಸಿದ್ದು, ಕಾರ್ಯಕ್ರಮದ ಆಯೋಜಕರು ಸೇರಿದಂತೆ 84 ಜನರನ್ನು ಬಂಧಿಸಿದ್ದಾರೆ. ಇದಲ್ಲದೇ 13 ನೃತ್ಯ ಹುಡುಗಿಯರೂ ಸಿಕ್ಕಿಬಿದ್ದಿದ್ದಾರೆ.

ಇವರನ್ನೆಲ್ಲಾ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಲು ಹೊರಗಿನಿಂದ ಕರೆಸಲಾಗಿತ್ತು. ಅಲ್ಲಿದ್ದವರಿಂದ 23 ಲಕ್ಷ 71 ಸಾವಿರ ರೂಪಾಯಿ ವಶಪಡಿಸಿಕೊಳ್ಳಲಾಗಿದ್ದು, ಮದ್ಯದ ಬಾಟಲಿಗಳು, ಹುಕ್ಕಾ, ಪ್ಲೇಯಿಂಗ್ ಕಾರ್ಡ್‌ಗಳು, 14 ಐಷಾರಾಮಿ ಕಾರುಗಳು ಮತ್ತು 1 ಟ್ರಕ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಬಂಧಿತರಾದವರಲ್ಲಿ ಕರ್ನಾಟಕ ಪೊಲೀಸ್ ಇನ್ಸ್‌ಪೆಕ್ಟರ್, ಬೆಂಗಳೂರಿನ ತಹಸೀಲ್ದಾರ್ ಮತ್ತು ಕಾಲೇಜು ಪ್ರಾಧ್ಯಾಪಕರು ಸೇರಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಕ್ರೈಂ ಬ್ರಾಂಚ್ ತಂಡ ದಾಳಿ ನಡೆಸಿದೆ ಎಂದು ಎಸಿಪಿ ಲಂಬಾ ತಿಳಿಸಿದ್ದಾರೆ.

Advertisement
Click to comment

You must be logged in to post a comment Login

Leave a Reply