Connect with us

  LATEST NEWS

  ಕಾರಂತ ಪ್ರಶಸ್ತಿ ರಗಳೆ ಕಪ್ಪು ಅಂಗಿಗೂ ಪೋಲೀಸರ ತರ್ಲೆ

  ಕಾರಂತ ಪ್ರಶಸ್ತಿ ರಗಳೆ ಕಪ್ಪು ಅಂಗಿಗೂ ಪೋಲೀಸರ ತರ್ಲೆ

  ಉಡುಪಿ,ಅಕ್ಟೋಬರ್ 10: ನಟ ಪ್ರಕಾಶ್ ರೈ ಗೆ ಶಿವರಾಮ ಕಾರಂತ ಪ್ರಶಸ್ತಿ ನೀಡುವುದನ್ನು ವಿರೋಧಿಸಿ ಬಿಜೆಪಿ, ಹಿಂದೂಪರ ಸಂಘಟನಗಳು ಹಾಗೂ ನಾಥ ಪಂಥದ ಸ್ವಾಮೀಜಿಗಳು ಉಡುಪಿಯ ಶಿವರಾಮ ಕಾರಂತ ಥೀಂ ಪಾರ್ಕ್ ಎದುರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಪ್ರಕಾಶ್ ರೈ ಗೌರಿ ಹತ್ಯೆ ಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಮಾತನಾಡಿದ್ದರೆ, ಬಳಿಕ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ನಟನೆ ಮಾಡುವ ನಟ ಎಂದು ವಿವಾದಿತ ಹೇಳಿಕೆ ನೀಡಿದ್ದರು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಜೋರಾಗಿರುವ ಅಸಹಿಷ್ಣುತೆಯ ಕಾರಣ ನೀಡಿ ಪ್ರಶಸ್ತಿ ವಾಪಾಸು ಕೊಡುವ ಗ್ಯಾಂಗ್ ನಲ್ಲೂ ಅವರು ಗುರುತಿಸಿಕೊಂಡಿದ್ದರು. ಇದರಿಂದ ಕೆರಳಿರುವ ಹಿಂದೂ ಸಂಘಟನೆಗಳು, ಬಿಜೆಪಿ ಪಕ್ಷ ಹಾಗೂ ನಾಥ ಪಂಥದ ಯೋಗಿಗಳು ಪ್ರಕಾಶ ರೈ ವಿರುದ್ಧ ಪ್ರತಿಭಟನೆ ನಡೆಸಿದರು. ಡಾ.ಶಿವರಾಮ ಕಾರಂತ ಪ್ರಶಸ್ತಿಯನ್ನು ಪ್ರಕಾಶ್ ರೈ ಗೆ ನೀಡಬಾರದೆಂದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಒತ್ತಾಯಿಸಿದರೆ, ನಾಥಪಂಥದ ಸ್ವಾಮೀಜಿಗಳು ಹಾಗೂ ಅನುಯಾಯಿಗಳು ಪ್ರಕಾಶ್ ರೈ ಕ್ಷಮೆ ಕೋರಬೇಕೆಂದು ಒತ್ತಾಯಿಸಿದವು.

  ವಿರೋಧದ ನಡುವೆಯೂ ನಟ ಪ್ರಕಾಶ್ ರೈ ಉಡುಪಿಯ ಥೀಂ ಪಾರ್ಕ್ ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರಲ್ಲದೆ, ಶಿವರಾಮ ಕಾರಂತ ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನೂ ಸ್ವೀಕರಿಸಿದರು. ಪ್ರಕಾಶ್ ರೈ ಪ್ರಶಸ್ತಿ ಸ್ವೀಕರಿಸಲು ಬರುವ ಹಿನ್ನಲೆಯಲ್ಲಿ ಪೋಲೀಸರು ಥೀಂ ಪಾರ್ಕ್ ಸುತ್ತ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ಪೋಲೀಸ್ ಸರ್ಪಗಾವಲಿನ ನಡುವೆಯೇ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ನಟನ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನಡೆಸಿದ 20 ಕ್ಕೂ ಮಿಕ್ಕಿದ ಪ್ರತಿಭಟನಾಕಾರರನ್ನು ಪೋಲೀಸರು ಬಂಧಿಸಿದ್ದಾರೆ.

  ಈ ನಡುವೆ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಕಾಶ್ ರೈ ಗೆ ಸಂಘಟಕರು ಸೀಯಾಳವನ್ನು ನೀಡಿದಾಗ ಅದರಲ್ಲಿದ್ದ ಪ್ಲಾಸ್ಟಿಕ್ ಸ್ಟ್ರೋ ತೆಗೆದು ಬಿಸಾಕಿ, ಕಾರಂತರಿಗೆ ಸ್ಟ್ರೋ ಇಷ್ಟವಿರಲಿಲ್ಲ, ಅದಕ್ಕೆ ನಾನು ಕಾರಂತರ ಈ ಸ್ಥಳದಲ್ಲಿ ಸ್ಟ್ರೋ ಉಪಯೋಗ ಮಾಡಲ್ಲ ಎಂದು ದೊಡ್ಡ ಡಯಲಾಗ್ ಕೂಡಾ ಹೊಡೆದರು. ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಹೋಗುವವರು ಕಪ್ಪು ಬಟ್ಟೆಯನ್ನು ಧರಿಸಿ ಹೋಗುವುದಕ್ಕೂ ಪೋಲೀಸರು ಅಡ್ಡಿಪಡಿಸಿದ ಪ್ರಸಂಗವೂ ನಡೆಯಿತು.

  Share Information
  Advertisement
  Click to comment

  You must be logged in to post a comment Login

  Leave a Reply