Connect with us

DAKSHINA KANNADA

ಹೋ ಕ್ವಾರೆಂಟೈನ್ ಸೂಚನೆ ಪಾಲಿಸದ ವ್ಯಕ್ತಿ ವಿರುದ್ಧ ಪೋಲೀಸ್ ಪ್ರಕರಣ 

 

ಹೋ ಕ್ವಾರೆಂಟೈನ್ ಸೂಚನೆ ಪಾಲಿಸದ ವ್ಯಕ್ತಿ ವಿರುದ್ಧ ಪೋಲೀಸ್ ಪ್ರಕರಣ 

ಪುತ್ತೂರು,ಎಪ್ರಿಲ್ 1:   ಹೋಂ ಕ್ವಾರಂಟೈನ್ ಸೂಚನೆ ಪಾಲಿಸದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮನೆಯಲ್ಲೇ ಇರಬೇಕಾಗಿದ್ದ ವ್ಯಕ್ತಿ ಊರಿಡೀ  ಸುತ್ತಾಡುತ್ತಿದ್ದನಲ್ಲದೆ, ಪ್ರಶ್ನಿಸಲು ಬಂದ ಅಧಿಕಾರಿಗಳ ಮೇಲೂ ಸವಾರಿ ಮಾಡಿದ್ದಾನೆ.

ಸವಣೂರು ಗ್ರಾ.ಪಂ. ವ್ಯಾಪ್ತಿಯ ಆರೇಲ್ತಡಿ ನಿವಾಸಿ ವಿರುದ್ಧ ಇದೀಗ  ಬೆಳ್ಳಾರೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. .

ಈ ವ್ಯಕ್ತಿ ಕೆಲ ದಿನಗಳ ಹಿಂದೆ ವಿದೇಶದಿಂದ ಆಗಮಿಸಿದ್ದು, 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರುವಂತೆ ಈತನಿಗೆ ಸೂಚಿಸಲಾಗಿತ್ತು.

ಅದರಂತೆ ಮಾ.30ರಂದು ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಗ್ರಾ.ಪಂ ನ ತಂಡ ಭೇಟಿ ನೀಡಿದ ವೇಳೆ ಆ ವ್ಯಕ್ತಿ ಮನೆಯಲ್ಲಿ ಇಲ್ಲದೇ ಇರುವುದು ಬೆಳಕಿಗೆ ಬಂದಿದೆ.

ಈ ಕುರಿತು ಮನೆಯವರಲ್ಲಿ ವಿಚಾರಿಸಿದಾಗ ಈತ ಮನೆಯಿಂದ ಹೊರ ಹೋಗಿರುವ ಬಗ್ಗೆ ಮಾಹಿತಿ ನೀಡಿದ್ದು, ಬಳಿಕ ಆ ವ್ಯಕ್ತಿಯನ್ನು ಮನೆಗೆ ಬರುವಂತೆ ಸೂಚಿಸಲಾಗಿದೆ.

ಮನೆಗೆ ಬಂದ  ವ್ಯಕ್ತಿಯನ್ನು  ಮನೆಯಲ್ಲಿರುವಂತೆ ತಿಳಿಸಲಾಗಿತ್ತು.

ಈ ವೇಳೆ ಅಧಿಕಾರಿಗಳ  ವಿರುದ್ದ  ತೋರಿಸಿದ್ದಾನೆ ಎಂದು ದೂರಲಾಗಿದೆ.

ಈ ಕಾರಣದಿಂದ ಸರ್ಕಾರದ ಸೂಚನೆ ಧಿಕ್ಕರಿಸಿದಕ್ಕಾಗಿ ಆತನ ಮೇಲೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *