ಮಂಗಳೂರಿಗೂ ದೆಹಲಿ ಮರ್ಕಝ್ ಲಿಂಕ್, ತೊಕ್ಕೋಟ್ಟಿನಲ್ಲಿ ಸಿಕ್ಕಿ ಬಿದ್ದ ಮಸೀದಿ ಅಧ್ಯಕ್ಷ, ಮೌಲಿ

ಮಂಗಳೂರು, ಎಪ್ರಿಲ್ 1: ದೆಹಲಿಯ ನಿಜಾಮುದ್ದೀನ್ ಮರ್ಕಝ್ ನಲ್ಲಿ ಕಡತಡಿಯ ವ್ಯಕ್ತಿಗಳಿಬ್ಬರು ಭಾಗಿಯಾಗಿರುವುದು ಇದೀಗ ಪತ್ತೆಯಾಗಿದೆ.

ಮಂಗಳೂರು ಹೊರವಲಯದ ತೊಕ್ಕೋಟಿನಲ್ಲಿರುವ ಮಸೀದಿಯೊಂದರ ಅಧ್ಯಕ್ಷ ಹಾಗೂ ಮೌಲಿ  ದೆಹಲಿಯಲ್ಲಿ ನಡೆದೆ ಮರ್ಕಝ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಕೆಲ ದಿನಗಳ ಹಿಂದೆಯಷ್ಟೇ ಮಂಗಳೂರಿಗೆ ಬಂದಿದ್ದರು.

ಬಳಿಕ ಮಂಗಳೂರು ಹಾಗೂ ಆಸುಪಾಸಿನಲ್ಲಿ ತಿರುಗಾಟವನ್ನೂ ನಡೆಸಿದ್ದು, ಮನೆ ಮನೆಗೆ ದಿನಸಿ ಸಾಮಾಗ್ರಿಗಳನ್ನೂ ಪೂರೈಸುವ ಕಾರ್ಯದಲ್ಲಿ ನಿರತನಾಗಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ಧಾರ್ಮಿಕ ಸಮ್ಮೇಳನದಲ್ಲಿ ವಿದೇಶಗಳ ಸೇರಿದಂತೆ ದೇಶದ ಹಲವಡೆಯಿಂದ ಮುಸ್ಲಿಂ ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.

ಈ ಸಮ್ಮೇಳನದಲ್ಲಿ ಭಾಗವಹಿಸಿದ ನೂರಕ್ಕೂ ಮಿಕ್ಕಿದ ಜನರಲ್ಲಿ ಕೊರೊನಾ ರೋಗ ಲಕ್ಷಣಗಳು ಪತ್ತೆಯಾಗಿದ್ದು, ತಮಿಳುನಾಡು, ತೆಲಂಗಾಲ, ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲಿ ಸಮಾವೇಶದಲ್ಲಿ ಭಾಗವಹಿಸಿದ ಮಂದಿ ಕೊರೊನಾ ಪೀಡಿತರಾಗಿ ಮೃತಪಟ್ಟ ಘಟನೆಯೂ ನಡೆದಿದೆ.

ದೆಹಲಿಯಿಂದ ಬಂದ ತೊಕ್ಕೋಟಿನ ವ್ಯಕ್ತಿಗಳನ್ನು ಮನೆಯಲ್ಲೇ ಇರುವುದನ್ನು ಪತ್ತೆಹಚ್ಚಿನ ಪೋಲೀಸರು ಹಾಗೂ ಆರೋಗ್ಯಾಧಿಕಾರಿಗಳು  ಮನೆಯಿಂದ ನೇರವಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತೊಕ್ಕೋಟಿನಲ್ಲಿ ಈ ವ್ಯಕ್ತಿಗಳು ಸೇರಿ ಸಾಮೂಹಿಕ ನಮಾಝ್ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದರು ಎನ್ನುವ ಮಾಹಿತಿ ಇದೀಗ ಪೋಲೀಸ್ ಮೂಲಗಳಿಂದ ಲಭ್ಯವಾಗಿದೆ.

ಜಿಲ್ಲೆಯಲ್ಲಿ ಇನ್ನೂ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸಂಶಯ ವ್ಯಕ್ತವಾಗಿದ್ದು, ಜಿಲ್ಲಾಡಳಿತ ಆ ವ್ಯಕ್ತಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದೆ.