LATEST NEWS
ಕರೋನಾ ಮುಂಜಾಗೃತ ಕ್ರಮವಾಗಿ ಅನಗತ್ಯ ವಾಹನ ಸಂಚಾರಕ್ಕೆ ಪೊಲೀಸರಿಂದ ಬ್ರೇಕ್

ಕರೋನಾ ಮುಂಜಾಗೃತ ಕ್ರಮವಾಗಿ ಅನಗತ್ಯ ವಾಹನ ಸಂಚಾರಕ್ಕೆ ಪೊಲೀಸರಿಂದ ಬ್ರೇಕ್
ಮಂಗಳೂರು ಮಾರ್ಚ್ 23: ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಯನ್ನು ರಾಜ್ಯಸರಕಾರ ಲಾಕ್ ಡೌನ್ ಮಾಡಿದೆ. ಕರೋನಾ ವೈರಸ್ ತಡೆಯಲು ಮುಂಜಾಗೃತ ಕ್ರಮವಾಗಿ ಜಿಲ್ಲೆ ಎಲ್ಲಾ ಗಡಿಭಾಗಗಳ ಚೆಕ್ ಪೊಸ್ಟ್ ಗಳನ್ನು ನಿರ್ಮಿಸಿ ವಾಹನಗಳ ಸಂಚಾರವನ್ನು ನಿಯಂತ್ರಿಸಲಾಗುತ್ತಿದೆ.ಆದರೆ ವಾಹನಗಳು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯಲ್ಲಿ ಸಂಚರಿಸುತ್ತಿವೆ.
ಇದೀಗ ಪೋಲೀಸರು ವಾಹನಗಳ ನಿಯಂತ್ರಣಕ್ಕೆ ಮುಂದಾಗಿದ್ದು, ಮಂಗಳೂರು ನಗರಕ್ಕೆ ಬರುವ ಎಲ್ಲಾ ವಾಹನಗಳನ್ನು ತಡೆಹಿಡಿದು ವಾಪಾಸು ಕಳುಹಿಸುತ್ತಿದ್ದಾರೆ.

ಈ ಕಾರಣಕ್ಕಾಗಿ ಮಂಗಳೂರಿಗೆ ತೆರಳಿದ ವಾಹನಗಳು ಇದೀಗ ಮತ್ತೆ ಹಿಂದಿರುಗಿ ಹೋಗುತ್ತಿದ್ದು, ಮಂಗಳೂರಿನ ನೇತ್ರಾವತಿ ಸೇತುವೆಯಲ್ಲಿ ವಾಹನಗಳ ಸಾಲೇ ಕಂಡು ಬಂದಿದೆ. ಪೋಲೀಸರು ಯಾವುದೇ ಕಾರಣಕ್ಕೂ ಅನಗತ್ಯ ವಾಹನ ಸಂಚಾರಕ್ಕೆ ಅನುವು ಮಾಡಿಕೊಡದ ಪರಿಣಾಮ ಇದೀಗ ಜಿಲ್ಲೆಯಲ್ಲಿ ವಾಹನಗಳ ಹಾಗೂ ಜನರ ಸಂಚಾರ ನಿಯಂತ್ರಣಕ್ಕೆ ಬಂದಿದೆ.