Connect with us

    KARNATAKA

    ಗಮನಿಸಿ : ಮೈಸೂರು-ಸಾಯಿನಗರ ಶಿರಡಿ ರೈಲು ಮಾರ್ಗ ಬದಲಾವಣೆ..!

    ಹುಬ್ಬಳ್ಳಿ : ಅಮೃತ ಭಾರತ ನಿಲ್ದಾಣ ಯೋಜನೆಯಡಿ ಬಳ್ಳಾರಿ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿ ಸಲುವಾಗಿ ಪ್ಲಾಟ್ ಫಾರ್ಮ್-3 ರಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ರೈಲುಗಳ ಸಂಚಾರವನ್ನು ನಿರ್ಬಂಧಿಸಿದೆ. ಹೀಗಾಗಿ ರೈಲುಗಳ ಸಂಖ್ಯೆ 16217/16218 ಮೈಸೂರು ಮತ್ತು ಸಾಯಿನಗರ ಶಿರಡಿ ನಿಲ್ದಾಣಗಳ ನಡುವೆ ಸಂಚರಿಸುತ್ತಿರುವ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲುಗಳನ್ನು 4 ದಿನಗಳ ಕಾಲ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ. ಅದರ ಮಾಹಿತಿ ಈ ಕೆಳಗಿನಂತಿವೆ.

     

    1. ಅಕ್ಟೋಬರ್ 2, 9, 16 & 23 ರಂದು ಮೈಸೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16217 ಮೈಸೂರು-ಸಾಯಿನಗರ ಶಿರಡಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಓಬಳಾಪುರಂ, ಬಳ್ಳಾರಿ ಬೈಪಾಸ್ ಕ್ಯಾಬಿನ್, ಬಳ್ಳಾರಿ ಕಂಟೋನ್ಮೆಂಟ್ ಮತ್ತು ಕುಡತಿನಿ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಬಳ್ಳಾರಿ ಜಂಕ್ಷನಲ್ಲಿ ನಿಲುಗಡೆ ಇರುವುದಿಲ್ಲ.

    2. ಅಕ್ಟೋಬರ್ 3, 10, 17 & 24 ರಂದು ಸಾಯಿನಗರ ಶಿರಡಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16218 ಸಾಯಿನಗರ ಶಿರಡಿ- ಮೈಸೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಕುಡತಿನಿ, ಬಳ್ಳಾರಿ ಕಂಟೋನ್ಮೆಂಟ್, ಬಳ್ಳಾರಿ ಬೈಪಾಸ್ ಕ್ಯಾಬಿನ್ ಮತ್ತು ಓಬಳಾಪುರಂ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಬಳ್ಳಾರಿ ಜಂಕ್ಷನಲ್ಲಿ ನಿಲುಗಡೆ ಇರುವುದಿಲ್ಲ.

    ಈ ರೈಲುಗಳಲ್ಲಿ ಪ್ರಯಾಣಿಸುವ (16217/18) ಪ್ರಯಾಣಿಕರ ಅನುಕೂಲಕ್ಕಾಗಿ ಬಳ್ಳಾರಿ ಕಂಟೋನ್ಮೆಂಟ್ ನಿಲ್ದಾಣದಲ್ಲಿ 5 ನಿಮಿಷಗಳ ತಾತ್ಕಾಲಿಕ ನಿಲುಗಡೆಯನ್ನು ಒದಗಿಸಲಾಗಿದೆ.

    II. ರೈಲುಗಳ ಸಂಚಾರ ರದ್ದು

    ಸಿಕಂದರಾಬಾದ್ ವಿಭಾಗದ ಮಾಕುಡಿ-ಸಿರಪುರ್ ಟೌನ್-ಸಿರಪುರ ಕಾಗಜನಗರ ನಿಲ್ದಾಣಗಳ ನಡುವಿನ 3ನೇ ಲೈನಿನ ಮಾರ್ಗದ ಎಂಜಿನಿಯರಿಂಗ್‌ಗೆ ಸಂಬಂಧಿಸಿದ ಕಾಮಗಾರಿ ಸಲುವಾಗಿ ಈ ಕೆಳಗಿನ ರೈಲುಗಳನ್ನು ರದ್ದುಪಡಿಸಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ವಲಯವು ಸೂಚಿಸಿದೆ.

    1. ಗೋರಖಪುರ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 22533 ಗೋರಖಪುರ-ಯಶವಂತಪುರ ಸಾಪ್ತಾಹಿಕ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲನ್ನು ಇಂದು (25.09.2023) ರದ್ದುಪಡಿಸಲಾಗಿದೆ.

    2.ಯಶವಂತಪುರ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 22534 ಯಶವಂತಪುರ-ಗೋರಖಪುರ ಸಾಪ್ತಾಹಿಕ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲನ್ನು 27.09.2023 ರಂದು ರದ್ದುಗೊಳಿಸಲಾಗುತ್ತಿದೆ

    Share Information
    Advertisement
    Click to comment

    Leave a Reply

    Your email address will not be published. Required fields are marked *