Connect with us

LATEST NEWS

ಭಾರತದ ವಿಮಾನ ಚಲಾಯಿಸುವ ಸಾಮರ್ಥ್ಯ ನಮ್ಮ ಪೈಲೆಟ್ ಗಳಿಗೆ ಇಲ್ಲ – ಮಾಲ್ಡೀವ್ಸ್ ರಕ್ಷಣಾ ಸಚಿವ

ಮಾಲೆ ಮೇ13 : ಚೀನಾ ಪರ ಧೋರಣೆಯ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅಧಿಕಾರ ಬಂದ ನಂತರ ಭಾರತದ ಸೈನಿಕರನ್ನು ವಾಪಾಸ್ ಭಾರತ್ತೆ ಕಳುಹಿಸಿಕೊಟ್ಟ ನಂತರ ಇದೀಗ ಮಾಲ್ಡೀವ್ಸ್ ಸಂಕಷ್ಟಕ್ಕೆ ಸಿಲುಕಿದೆ. ಭಾರತ ದೇಣಿಗೆಯಾಗಿ ನೀಡಿದ ಮೂರು ಯುದ್ಧ ವಿಮಾನಗಳ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ತಮ್ಮ ಪೈಲಟ್‌ಗಳಿಗೆ ಇಲ್ಲ ಎಂದು ಮಾಲ್ಡೀವ್ಸ್ ರಕ್ಷಣಾ ಸಚಿವರು ಅಲವತ್ತುಕೊಂಡಿದ್ದಾರೆ.

ಚೀನಾ ಪರ ಧೋರಣೆಯ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರ ಹಠಮಾರಿತನದಿಂದ ದ್ವೀಪ ರಾಷ್ಟ್ರದಿಂದ ಭಾರತದ 76 ರಕ್ಷಣಾ ಸಿಬ್ಬಂದಿ ನಿರ್ಗಮಿಸಿದ ಕೆಲವು ದಿನಗಳ ಬಳಿಕ ಅಲ್ಲಿನ ರಕ್ಷಣಾ ಸಚಿವ ಘಾಸೆನ್ ಮೌಮೂನ್ ಅವರು, ಮಾಲ್ಡೀವ್ಸ್ ಸೇನೆಯು ಅಷ್ಟು ಸಮರ್ಥ ಪೈಲಟ್‌ಗಳನ್ನು ಹೊಂದಿಲ್ಲ ಎಂದಿದ್ದಾರೆ. ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಘಾಸೆನ್, ಹಿಂದಿನ ಸರ್ಕಾರಗಳ ನಡುವೆ ನಡೆದ ಒಪ್ಪಂದದಂತೆ ಕೆಲವು ಯೋಧರಿಗೆ ವಿಮಾನ ಹಾರಾಟ ತರಬೇತಿ ನೀಡುವುದನ್ನು ಆರಂಭಿಸಿದ್ದರೂ, ಭಾರತೀಯ ಸೇನೆ ದೇಣಿಗೆಯಾಗಿ ನೀಡಿರುವ ಮೂರು ವಿಮಾನಗಳ ಕಾರ್ಯಾಚರಣೆ ನಡೆಸುವಂತಹ ಸೈನಿಕರು ಮಾಲ್ಡೀವ್ಸ್ ನ್ಯಾಷನಲ್ ಡಿಫೆನ್ಸ್ ಫೋರ್ಸ್‌ನಲ್ಲಿ (ಎಂಎನ್‌ಡಿಎಫ್) ಇಲ್ಲ ಎಂದು ತಿಳಿಸಿದ್ದಾರೆ.


ಈ ಯುದ್ಧ ವಿಮಾನಗಳನ್ನು ಓಡಿಸಲು ವಿವಿಧ ಹಂತಗಳ ತರಬೇತಿ ಮುಗಿಸುವುದು ಅಗತ್ಯವಾಗಿದೆ. ನಮ್ಮ ಯೋಧರು ವಿವಿಧ ಕಾರಣಗಳಿಂದಾಗಿ ಈ ತರಬೇತಿಗಳನ್ನು ಪೂರ್ಣಗೊಳಿಸುವುದು ಸಾಧ್ಯವಾಗಿಲ್ಲ. ಹೀಗಾಗಿ ಎರಡು ಹೆಲಿಕಾಪ್ಟರ್‌ಗಳು ಮತ್ತು ಒಂದು ಡಾರ್ನಿಯರ್ ಏರ್‌ಕ್ರಾಫ್ಟ್‌ಗಳ ಸಂಪೂರ್ಣ ಕಾರ್ಯಾಚರಣೆಗೆ ನಡೆಸುವ ಸಾಮರ್ಥ್ಯ ಅಥವಾ ಪರವಾನಗಿ ಪಡೆದ ಯಾವುದೇ ವ್ಯಕ್ತಿ ನಮ್ಮ ಪಡೆಯಲ್ಲಿ ಇಲ್ಲ” ಎಂದು ರಕ್ಷಣಾ ಸಚಿವ ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *