FILM
ಬಿಳಿ ಸೀರೆಯನ್ನುಟ್ಟು ನದಿಯಲ್ಲಿ ಮಿಂದೆದ್ದ ಕಣ್ಣಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್
ಕೇರಳ ಅಕ್ಟೋಬರ್ 16: ಮಲೆಯಾಳಂ ಸಿನಿಮಾದಲ್ಲಿ ತನ್ನ ಕಣ್ಣಸನ್ನೆ ಮೂಲಕ ಇಡೀ ದೇಶದಲ್ಲಿ ಟ್ರೆಂಡ್ ಹುಟ್ಟುಹಾಕಿದ್ದ ಮಲೆಯಾಳಂ ಬೆಡಗಿ ಇದೀಗ ತನ್ನ ಹಾಟ್ ಪೋಟೋ ಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾಳೆ.
ತನ್ನ ಮೊದಲ ಸಿನೆಮಾದಲ್ಲೇ ಇಡೀ ದೇಶದ ಕ್ರಶ್ ಆಗಿ ಬದಲಾಗಿದ್ದ ಪ್ರಿಯಾ ಪ್ರಕಾಶ್ ವಾರಿಯಾರ್. ಆ ಸಿನೆಮಾದ ನಂತರ ಈಕೆಯ ಯಾವುದೇ ಸಿನೆಮಾಗಳು ಹಿಟ್ ಆಗಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರು ಪ್ರಿಯಾ ಪ್ರಕಾಶ್ ಬೋಲ್ಡ್ ಪೋಟೋ ಗಳನ್ನು ಪೋಸ್ಟ್ ಮಾಡುತ್ತಾ ಇರುತ್ತಾರೆ.
ಇದೀಗ ನದಿಯೊಂದರಲ್ಲಿ ಕೇರಳ ಕುಟ್ಟಿ ಶೈಲಿಯಲ್ಲಿ ಸೀರೆ ಧರಿಸಿ ನೀರಲ್ಲಿ ಮಿಂದೆದ್ದು ಪೋಸ್ ಕೊಟ್ಟಿದ್ದಾಳೆ. ಸದ್ಯ ಈ ಹಾಟ್ ಪೋಟೋ ಶೂಟ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ನಲ್ಲಿದೆ.
ಬಿಳಿ ಸೀರೆಯನ್ನುಟ್ಟು ನದಿಯಲ್ಲಿ ಮಿಂದೆದ್ದು ಮೈಮಾಟ ಪ್ರದರ್ಶನ ಮಾಡಿದ್ದು, ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
You must be logged in to post a comment Login