Connect with us

    LATEST NEWS

    ರಾಷ್ಟ್ರೀಯ ಹೆದ್ದಾರಿ 66 ಕಾಪು ಬಳಿ ಮಗುಚಿ ಬಿದ್ದ ಪಿಕ್ ಅಪ್ ವಾಹನ

    ರಾಷ್ಟ್ರೀಯ ಹೆದ್ದಾರಿ 66 ಕಾಪು ಬಳಿ ಮಗುಚಿ ಬಿದ್ದ ಪಿಕ್ ಅಪ್ ವಾಹನ

    ಉಡುಪಿ ಮೇ.27: ಶಿವಮೊಗ್ಗದಿಂದ ಮಂಗಳೂರು ಕಡೆ ಸಾಗುತ್ತಿದ್ದ ಪಿಕ್ಆಪ್ ಪಿಕ್‌ಆಪ್ ವಾಹನವೊಂದು ಹೆದ್ದಾರಿ ಮದ್ಯೆ ಮಗುಚಿ ಬಿದ್ದು ಮತ್ತೊಂದು ವಾಹನಕ್ಕೆ ಢಿಕ್ಕಿ ಹೊಡೆದ ಘಟನೆ ರಾ.ಹೆ. 66 ರ ಮೂಳೂರು ಸರ್ವೇಶ್ವರ ಬಬ್ಬರ್ಯ ಕೊಡಮಣಿತ್ತಾಯ ದೇವಸ್ಥಾನದ ಬಳಿ ಇಂದು ಮುಂಜಾನೆ ನಡೆದಿದೆ.

    ಈ ಪಿಕಪ್ ವಾಹನ ಶಿವಮೊಗ್ಗದಿಂದ ಮಂಗಳೂರು ಕಡೆ ಸಾಗುತ್ತಿದ್ದು ಎನ್ನಲಾಗಿದೆ. ಹಣ್ಣು ತುಂಬಿಸಿಕೊಂಡು ಬರುತ್ತಿದ್ದ ಮಿನಿ ಟೆಂಫೋ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಇದರ ಪರಿಣಾಮ ಹಿಂದಿನಿಂದ ಮೀನು ತುಂಬಿಸಿಕೊಂಡು ಕಿನ್ನಿಗೋಳಿ ಕಡೆಗೆ ಸಾಗುತ್ತಿದ್ದ ವಾಹನ ಡಿಕ್ಕಿ ಹೊಡೆದ ಪರಿಣಾಮ‌ ಈ ಘಟನೆ ಸಂಭವಿಸಿದೆ.

    ಘಟನೆಯಲ್ಲಿ ಹಣ್ಣಿನ ವಾಹನದ ಚಾಲಕನಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಅರ್ಧ ಗಂಟೆಗಳ ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಕಾಪು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಚಾರ ಸುಗಮಗೊಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply